Visitors have accessed this post 355 times.
ನಿರಂತರ ಎಡಬಿಡದೆ ಸುರಿದ ಮಳೆಯಿಂದಾಗಿ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ,ಅದ್ಯಕ್ಷರಾದ ಅಶ್ರಪ್ ಸಾಲೆತ್ತೂರು ಬೇಟಿ,ಪರಿಶೀಲನೆ,ಶೀಘ್ರ ಕಾಮಾಗಾರಿಗೆ ಸೂಚನೆ.
ಭಾರೀ ಮಳೆಗೆ ತತ್ತರಿಸಿ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಕೊಳ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ವಿವಿದೆಡೆಗೆ ಸಾಲೆತ್ತೂರು,ನಾಟೆಕಲ್ಲು,ಮಾದಕಟ್ಟೆ ವಾರ್ಡಿನ ಬಾರೆಬೆಟ್ಟು,ತಾಳಿತ್ತನೂಜಿ-ನಾರ್ಶ,ಸುರಿಬೈಲ್ ಸೇರಿದಂತೆ ಅತೀಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲಿಸಲಾಯಿತು.ಅಲ್ಲದೆ ತಾಳಿತ್ತನೂಜಿ ನಾರ್ಶ ಶಿಕ್ಷಣ ಸಂಸ್ಥೆಯ ಪ್ರೌಡಶಾಲಾ ವಿಭಾಗದ ಅನ್ನದಾಸೋಹ ಕಟ್ಟಡ ಮಳೆಗೆ ಹಾನಿಯಾಗಿದ್ದು,ಸುತ್ತಮುತ್ತಲಿನ ಮರಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಿ,ಹಾನಿಗೊಳಗಾದ ಕಟ್ಟಡ ಸರಿಪಡಿಸುವಂತೆ ಸೂಚಿಸಲಾಯಿತು.ಪದವಿಪೂರ್ವ ಕಟ್ಟಡಗಳ ಸಣ್ಣಪುಟ್ಟ ಕಾಮಾಗಾರಿ,ಅಂಗನವಾಡಿ ಕಟ್ಟಡದ ಉಳಿದ ಕಾಮಾಗಾರಿ ಸೇರಿದಂತೆ ಹಂತಹಂತವಾಗಿ ಮಾಡುವಂತೆ ಸೂಚಿಸಲಾಯಿತು. ನಂತರ ಸುರಿಬೈಲ್ ಶಾಲೆಗೆ ಬೇಟಿನೀಡಿ ಅವಹಾಲು ಸ್ವೀಕರಿಸಲಾಯಿತು.ಅಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಗುಡ್ಡಜರಿದು ಮಣ್ಣುಬಿದ್ದಿದ್ದು ಜೆಸಿಬಿಯ ಮೂಲಕ ಕೆಲಸಕಾರ್ಯಗಳನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾ.ಪಂಚಾಯತ್, ಮಾಜಿ ಸದಸ್ಯರಾದ ಪವಿತ್ರ ಪೂಂಜ,ಹಸೈನಾರ್ ತಾಳಿತ್ತನೂಜಿ, ಗುತ್ತಿಗೆದಾರ ಅಶ್ರಪ್ ಉಪಸ್ಥಿತರಿದ್ದರು.