Visitors have accessed this post 216 times.

ಇಂದಿರಾ ಕ್ಯಾಂಟೀನ್‌ನಲ್ಲಿ ಡಿಜಿಟಲ್ ಟಚ್: ಇನ್ಮುಂದೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌!

Visitors have accessed this post 216 times.

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನ ಅಪ್‌ಗ್ರೇಡ್‌ ಮಾಡಲು ಬಿಬಿಎಂಪಿ ಮುಂದಾಗಿದ್ದು, ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡಲು ಪಾಲಿಕೆ ಮುಂದಾಗಿದ್ದು, ಇನ್ಮುಂದೆ ಗ್ರಾಹಕರು ಎಲ್‌ಇಡಿ ಮಾದರಿಯ ಮಿಷಿನ್ ಮೂಲಕ ಇಂದಿರಾ ಕ್ಯಾಂಟೀನ್ ಊಟವನ್ನು ಬುಕ್ಕಿಂಗ್‌ ಮಾಡಬಹುದು. ಬಿಬಿಎಂಪಿ ಎಲ್‌ಇಡಿ ಮಾದರಿಯ ಮಿಷಿನ್‌ ಸ್ಕ್ರೀನ್‌ ಅಳವಡಿಸಿ, ಅದರಲ್ಲೇ ಊಟ ಬುಕ್‌ ಮಾಡುವ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ. ಪ್ರಾಥಮಿಕ ಹಂತವಾಗಿ ರಾಜರಾಜೇಶ್ವರಿ ನಗರ ವಲಯದಲ್ಲಿ 11 ಕ್ಯಾಂಟೀನ್‌ಗಳಲ್ಲಿ‌ ಅನುಷ್ಟಾನಗೊಳಿಸಲಾಗಿದೆ. ಯಾವ ಕ್ಯಾಂಟೀನ್‌ಗಳಲ್ಲಿ ಎಷ್ಟು ಊಟ ಹೋಗಿದೆ? ಊಟದ ಗುಣಮಟ್ಟ ಹೇಗಿದೆ? ಅನ್ನೋದನ್ನ ತಕ್ಷಣಕ್ಕೆ ತಿಳಿಯಬಹುದು. ಈ ಮೂಲಕ ಊಟವನ್ನ ಪಾರ್ಸೆಲ್ ಮಾಡಿ ಸೇಲ್ ಮಾಡೋದು, ಕ್ವಾಲಿಟಿ ಇಲ್ಲ ಅನ್ನೋ ದೂರುಗಳನ್ನ ತಡೆಗಟ್ಟಬಹುದು. ತಾಂತ್ರಿಕತೆ ಅಭಿವೃದ್ಧಿಪಡಿಸುವುದು ಸರಿ ಆದ್ರೆ ಅನಕ್ಷರಸ್ಥರು ಹೇಗೆ ಇದನ್ನ ಆಪರೇಟ್ ಮಾಡ್ತಾರೆ. ಅವ್ರು ಹೇಗೆ ಊಟವನ್ನ ತೆಗೆದುಕೊಳ್ತಾರೆ? ಅನ್ನೋದನ್ನ ಕೆಲ ಗ್ರಾಹಕರು ಪ್ರಶ್ನೆ ಮಾಡ್ತಿದ್ದಾರೆ. ಸೆಲ್ಫ್ ಕಿಯೋಕ್ಸ್ ಮಿಷಿನ್ ಅಳವಡಿಕೆಯಲ್ಲಿ ಊಟದ ಮೆನುವನ್ನ, ಮೊದ್ಲೇ ಪ್ರೊಗ್ರಾಮಿಂಗ್ ಮಾಡಲಾಗುತ್ತದೆ. ಮೆನುವಿನಲ್ಲಿದ್ದ ಯಾವ ಊಟ ಬೇಕೋ, ಆ ಊಟವನ್ನ ಆಯ್ಕೆ ಮಾಡಿಕೊಂಡ್ರೆ, ಕ್ಯಾಂಟೀನ್ ಸಿಬ್ಬಂದಿ ಕೊಡುತ್ತಾರೆ. ಇದಕ್ಕಿಂತ ಮೊದಲು ಮೂರು ತಂತ್ರಜ್ಞಾನಗಳನ್ನ ಬಳಸಿಕೊಂಡು ಟ್ರಯಲ್‌ ಟೆಸ್ಟ್ ಮಾಡಿದ್ರೂ, ಸಕ್ಸಸ್ ಆಗಿರಲಿಲ್ಲ. ಹೀಗಾಗಿ ಇದೀಗಾ ಹೊಸ ವ್ಯವಸ್ಥೆಗೆ ಪಾಲಿಕೆ ಮುಂದಾಗಿದೆ. ಐಟಿ ವಿಭಾಗಕ್ಕೆ ಈಗಾಗಲೇ ಕಡತ ಕಳುಹಿಸಿರುವ ಬಿಬಿಎಂಪಿ, ಈ ಹೊಸ ವ್ಯವಸ್ಥೆ ಜಾರಿಗೆ ತರಲು ಟೆಂಡರ್ ಕರೆಯೋದಕ್ಕೂ ಮುಂದಾಗಿದೆ.

Leave a Reply

Your email address will not be published. Required fields are marked *