January 17, 2026
WhatsApp Image 2024-08-12 at 8.59.16 AM

ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಕಡಪ್ಪರ ಸಮೀರ್ ರವರ ಹತ್ಯೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ನಡೆದಿದೆ. ನಿನ್ನೆ ರಾತ್ರಿ ತನ್ನ ತಾಯಿ ಜೊತೆ ಊಟಕ್ಕೆಂದು ರೆಸ್ಟೋರೆಂಟ್ ಗೆ ತೆರಳುತ್ತಿದ್ದಾಗ ರೌಡಿ ಶೀಟರ್ ಮೇಲೆ ತಲ್ವಾರ್ ದಾಳಿಯಾಗಿದೆ, ಸಮೀರ್ ಕಾರಿನಿಂದ ಇಲ್ಲಿಯುತ್ತಿದ್ದಾಗಲೇ ಮತ್ತೊಂದು ಕಾರಿನಲ್ಲಿ ಬೆನ್ನಟ್ಟಿ ಬಂದಿದ್ದ ಐದಾರು ಮಂದಿಯಿದ್ದ ತಂಡವು ಸಮೀರ್ ರವರನ್ನು ಬೆನ್ನಟ್ಟಿ ಹತ್ಯೆ ಮಾಡಿದ್ದಾರೆ. ಸಮೀರ್ ರವರನ್ನು ದುಷ್ಕರ್ಮಿಗಳು ತನ್ನ ತಾಯಿಯ ಕಣ್ಣೆದುರಲ್ಲೇ ಅಟ್ಟಾಡಿಸಿ ದಾಳಿ ಮಾಡಿದ್ದಾರೆ. ಘಟನೆ ನಡೆದ ತಕ್ಷಣ ಅಲ್ಲಿ ಸೇರಿದ ಜನರನ್ನು ನೋಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದರೋಡೆ ಪ್ರಕರಣದಲ್ಲಿ ಒಂದು ತಿಂಗಳ ಹಿಂದೆ ಜೈಲು ಸೇರಿಕೊಂಡಿದ್ದ ಸಮೀರ್ ಮತ್ತು ತಂಡ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದು, ಇದೀಗ ತಲ್ವಾರ್ ದಾಳಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ. ಜನವರಿ 13 2018 ರಂದು ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಟಾರ್ಗೆಟ್ ಇಲ್ಯಾಸ್ ನನ್ನು ಮುಂಜಾನೆ ಸಮೀ‌ರ್ ಮತ್ತು ತಂಡ ಮನೆ ಬಾಗಿಲನ್ನು ಒಡೆದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದನು.

About The Author

Leave a Reply