October 27, 2025
WhatsApp Image 2024-08-12 at 5.56.15 PM

ಮಂಗಳೂರು: “ಆರೋಗ್ಯ ಕ್ಷೇತ್ರದಲ್ಲಿ ತನ್ನ ಉನ್ನತ ಛಾಪನ್ನು ಮೂಡಿಸಿದ ಇಂದಿರಾ ಆಸ್ಪತ್ರೆ ತನ್ನ 25ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. 1999

ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಮುದಾಯಕ್ಕೆ ಉನ್ನತ ಯೋಗಕ್ಷೇಮವನ್ನು ನೀಡುವಲ್ಲಿ ನಿರತವಾಗಿದೆ. ಕಳೆದ ಕಾಲು ಶತಮಾನದಲ್ಲಿ, ಇದು ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ
ವಿಶಾಲವಾದ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಸಯ್ಯದ್ ನಿಜಾಮುದ್ದಿನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಂದಿರಾ ಎಜ್ಯುಕೇಶನಲ್
ಟ್ರಸ್ಟ್ – ನರ್ಸಿಂಗ್, ಅಲೈಡ್ ಆರೋಗ್ಯ ಮತ್ತು ಫಿಸಿಯೋಥೆರಪಿ ಕೋರ್ಸ್‌ಗಳನ್ನು ಒಳಗೊಂಡ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. ಉತ್ತಮ ಆರೋಗ್ಯ ವೃತ್ತಿಪರರನ್ನು ನಿರ್ಮಿಸುವಲ್ಲಿ ತನ್ನ ಬದ್ಧತೆಗೆ ಪ್ರಸಿದ್ಧವಾಗಿದೆ. ಈ ಪ್ರಮುಖ ಮೈಲಿಗಲ್ಲನ್ನು ನೆನಪಿಸಿಕೊಳ್ಳಲು, ಇಂದಿರಾ ಆಸ್ಪತ್ರೆ ತನ್ನ ಗೌರವಾನ್ವಿತ ವೈದ್ಯರು ಮತ್ತು ಸಿಬ್ಬಂದಿಯ
ಕೊಡುಗೆಗಳನ್ನು ಗೌರವಿಸಲು ವಾರ್ಷಿಕೋತ್ಸವ ಸಂಭ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹೆಚ್ಚುವರಿಯಾಗಿ, ಸಮುದಾಯದ ಆರೋಗ್ಯವನ್ನು ಬೆಂಬಲಿಸಲು ರಕ್ತದಾನ ಶಿಬಿರವನ್ನು ಕೂಡಾ ಆಯೋಜಿಸಲಾಗಿದೆ.
ವಾರ್ಷಿಕೋತ್ಸವ ಆಚರಣೆಯು ಆ.15 2024 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ನನ್ ಸೆಂಟರ್‌ನಲ್ಲಿ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹಾಗೂ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯೆನೆಪೋಯಾ ವಿಶ್ವವಿದ್ಯಾಲಯದ
ಗೌರವ ಕುಲಪತಿ ಡಾ. ಅಬ್ದುಲ್ಲಾ ಕುಂಞ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ
ನೋಂದಣಾಧಿಕಾರಿ ಡಾ.ರಿಯಾಜ್ ಬಾಷಾ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಮೈಲಿಗಲ್ಲು ಸಂಭ್ರಮವು ರೋಗಿಗಳ ಆರೈಕೆಗೆ ಬದ್ಧತೆಯಿಂದ ಗುರುತಿಸಲ್ಪಟ್ಟ ಬೆಳವಣಿಗೆ ಮತ್ತು ನಾವೀನ್ಯತೆಯ
ಪ್ರಯಾಣವನ್ನು ಪ್ರತಿಬಿಂಬಿಸಲಿದೆ. ಆಸ್ಪತ್ರೆ ತನ್ನ ಯಶಸ್ಸಿಗೆ ಕಾರಣರಾದ ತನ್ನ ನಿಷ್ಠಾವಂತ ಸಿಬ್ಬಂದಿ, ಬೆಂಬಲಿತ ಸಮುದಾಯ ಮತ್ತು ಆರೋಗ್ಯ ಸೇವಾ ಪಾಲುದಾರರಿಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂದಿರಾ ಆಸ್ಪತ್ರೆಯು ಸಮುದಾಯಕ್ಕೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮುಂದುವರಿಸಲಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಯ್ಯದ್ ಜಮಾಲುದ್ದಿನ್, ಅಶ್ರಫ್ ಉಪಸ್ಥಿತರಿದ್ದರು.

About The Author

Leave a Reply