Visitors have accessed this post 3556 times.
ಉಳ್ಳಾಲ : ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ರೌಡಿ ಶೀಟರ್ ಸಮೀರ್ ಕೊಲೆ ಪ್ರಕರಣ ಸಂಬಂಧ ಇಬ್ಬರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ತೊಕ್ಕೊಟ್ಟು ಫಾಸ್ಟ್ ಫುಡ್ ಗೆ ತಾಯಿ, ಪತ್ನಿ ಹಾಗೂ ಮಕ್ಕಳ ಜೊತೆ ಬಂದಿದ್ದ ಸಮೀರ್ ನನ್ನು ಕಾರಲ್ಲಿ ಫಾಲೋ ಮಾಡಿ ಬಂದ ನಾಲ್ವರ ತಂಡ ಕುಟುಂಬ ಸದಸ್ಯರ ಮುಂದೆಯೇ ಭೀಕರವಾಗಿ ಕೊಲೆ ಮಾಡಿ ಬಳಿಕ ಪರಾರಿಯಾಗಿತ್ತು.
2018 ರಲ್ಲಿ ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಕೊಲೆಯ ಬಳಿಕ ಬಂಧನವಾಗಿದ್ದ ಸಮೀರ್ 2023ರಲ್ಲಿ ಆ ಪ್ರಕರಣದಲ್ಲಿ ಖುಲಾಸೆಯಾಗಿದ್ದ. ಬಳಿಕ ಕೆಲ ಸಮಯದ ಹಿಂದೆ ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಕೊಲೆಯಾಗುವ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಸಮೀರ್ ಕೊಲೆಗೆ ಜೈಲಲ್ಲೇ ಸ್ಕೆಚ್..!?
ದರೋಡೆ ಪ್ರಕರಣ ಒಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಮೀರ್ ಮೇಲೆ ಜುಲೈ 1ರಂದು ಕಾರಾಗೃಹದಲ್ಲಿ ಜೈಲಿನ ಆವರಣದಲ್ಲೇ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದ ಹಲ್ಲೆ ನಡೆದಿತ್ತು. ಈ ಬಗ್ಗೆ ಬರ್ಕೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಸಮೀರ್ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಒಪನ್ ಆಗಿತ್ತು.