ಗೌರಿ‌ ಲಂಕೇಶ್, ಎಂಎಂ ಕಲಬುರಗಿ ಹತ್ಯೆ ಹಿಂದೆ ಸಂಘ, ಸಂಸ್ಥೆಗಳ ಕೈವಾಡ – ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಗೌರಿ ಲಂಕೇಶ್ ಹತ್ಯೆ ಆರೋಪಿ ಮನೆಗೆ ಪ್ರತಾಪ್ ಸಿಂಹ ಭೇಟಿ ಕೊಟ್ಟ ಫೊಟೊ ವೈರಲ್ ವಿಚಾರವಾಗಿ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು,ವೈರಲ್ ಆಗೋದು ಬೇರೆ, ತಮ್ಮ ಸಾಮಾಜಿಕ ಜಾಲತಾಣದಲ್ಲಿ‌ ಹಾಕಿ ಹೆಮ್ಮೆ ಪಡೋದು ಬೆರೆ, ಕಾರಣಗಳು ಏನೇ ಇರಬಹುದು, ನನಗಿಂತ ಹೆಚ್ಚು ಕೆಲಸ ಮಾಡದೇ ಇರೊರಿಲ್ಲಾ ಎಂದು ಬೀಗುತ್ತಾರೆ. ಸಾಂಸ್ಕೃತಿಕ ನಗರಿ ರಾಯಭಾರಿ ಎಂದು ಹೇಳಿಕೊಂಡು ಓಡಾಡೊರು ಇವತ್ತು ಇಂತಹ ಮನಸ್ಥಿತಿಗೆ ಇಳಿದಿದ್ದಾರೆ. ಮೊದಲಿನಿಂದಲೂ ಹೇಳ್ತಿದ್ವಿ, ಹತ್ಯೆಗಳ ಹಿಂದೆ ಇಂತಹ ಸಂಸ್ಥೆ ಸಂಘಟನೆಗಳು ಅದರ ಹಿಂದೆ ಇದೆ ಎಂದು. ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು?ನಾಚಿಕೆ ಬರಬೇಕು ಇವರಿಗೆ ಎಂದು ವಾಗ್ದಾಳಿ ಮಾಡಿದರು.

Leave a Reply