Visitors have accessed this post 243 times.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬೂತ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

Visitors have accessed this post 243 times.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬೂತ್ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಸಂಟ್ಯಾರ್ ಶಾಲಾ ಬಳಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಸಂಟ್ಯಾರ್ ಬೂತ್ ಸಮಿತಿ ಅಧ್ಯಕ್ಷರಾದ ಮಸೂದ್ ಸಂಟ್ಯಾರ್‌ರವರು ವಹಿಸಿ ಧ್ವಜಾರೋಹಣ ನೆರವೇರಿಸಿದರು.

SDPI ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿಯಾದ ಉಸ್ಮಾನ್ ಎ.ಕೆ ರವರು ಸಂದೇಶ ಭಾಷಣ ಮಾಡಿದರು.

SDPI ಪುತ್ತೂರು ವಿಧಾನಸಭಾ ಸಂಘಟನಾ ಕಾರ್ಯದರ್ಶಿಯಾದ ರಿಯಾಝ್ ಬಳಕ್ಕರವರು ಪ್ರಾಸ್ತಾವಿಕ ಭಾಷಣಗೈದರು.ದ.ಕ.ಜಿ.ಪ.ಹಿ.ಪ್ರಾ.ಶಾಲೆ ಹಂಟ್ಯಾರು ಇಲ್ಲಿನ ಶಾಲಾ SDMC ಅಧ್ಯಕ್ಷರಾದ ಬಾಬು ಮರಿಕೆರವರು ಅತಿಥಿ ಭಾಣಗೈದರು.

ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಇಬ್ರಾಹಿಂ ಕೆ.ಪಿ , SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ರಹಿಮಾನ್ ಪುತ್ತೂರು , ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಂಶುದ್ದೀನ್ ಕಲ್ಲರ್ಪೆ , ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ ಸದಸ್ಯರಾದ ಉಮ್ಮರ್ ಕಲ್ಲರ್ಪೆ , ಹಾಗೂ ಬೆಂಗಳೂರಿನ ಉದ್ಯಮಿಯಾದ ಸತ್ತಾರ್ ಸಂಟ್ಯಾರ್ ಉಪಸ್ಥಿತರಿದ್ದರು.SDPI ಸಂಟ್ಯಾರ್ ಬೂತ್ ಸಮಿತಿ ಕಾರ್ಯದರ್ಶಿಯಾದ ಝಕರಿಯಾ ಸಂಟ್ಯಾರ್ ಸ್ವಾಗತಿಸಿ ವಂದಿಸಿದರು.‌

ಮಕ್ಕಳು , ಊರ ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಎಸ್ಡಿಪಿಐ ಸಂಟ್ಯಾರ್ ಬ್ರಾಂಚ್ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಭಿತ್ತಿಪತ್ರ ಪ್ರದರ್ಶಿಸಿ ಜನಾಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *