ಇತಿಹಾಸ ಪ್ರಸಿದ್ದ ಕನ್ಯಾನ ರಹ್ಮಾನಿಯಾ ಜಮಾಅತ್ ಮತ್ತು ಆಧೀನದ 7 ಮೊಹಲ್ಲಾಗಳ ನೂತನ ಖಾಝಿಯಾಗಿ (ದಾರ್ಮಿಕ ನ್ಯಾಯಧೀಶರು) ಬಹು ಸುಲ್ತಾನುಲ್ ಉಲಮಾ ಏ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಆಗಸ್ಟ್ 17 ರಂದು ಉಳ್ಳಾಲದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು
ಈ ಮೊದಲು ಕನ್ಯಾನ ಖಾಝಿಗಳಾಗಿದ್ದ ಬಹುಮಾನ್ಯ ಸೈಯ್ಯದ್ ಪಝಲ್ ಕೋಯಮ್ಮ ಕೂರತ್ ತಂಙಲ್ ರವರ ಅಗಲುವಿಕೆಯಿಂದ ತೆರವಾಗಿದ್ದ ಖಾಝಿ ಸ್ಥಾನಕ್ಕೆ ಜಾಗತೀಕ ಮಟ್ಟದಲ್ಲಿ ಚಿರಪರಿಚಿತರಾದ ಹಿರಿಯ ಸುನ್ನೀ ವಿಧ್ವಾಂಸರೂ, ಬಾರತದ ಗ್ರ್ಯಾಂಡ್ ಮುಫ್ತಿಯೂ ಆದ ಕಾಂತಪುರಂ ಉಸ್ತಾದರನ್ನು ಜಮಾಅತ್ ಸಮಿತಿ ಒಕ್ಕೊರಲಿನಿಂದ ತೀರ್ಮಾನಿಸಿದರು
ಕನ್ಯಾನ ರಹ್ಮಾನಿಯಾ ಜಮಾಅತ್ ಮತ್ತು ಆಧೀನದ 7 ಮೊಹಲ್ಲಾಗಳ ಪ್ರತಿನಿಧಿಯಾಗಿ ಕನ್ಯಾನ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ ಬೈಅತ್ ಮಾಡಿದರು, ಕನ್ಯಾನ ಮುದರ್ರೀಸ್ ಶೈಖುನಾ ಇಬ್ರಾಹಿಂ ಫೈಝಿ ಪ್ರ.ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮಂಡ್ಯೂರು ಸಹಿತ ಜಮಾಅತ್ ಕಮಿಟಿ ಪದಾದಿಕಾರಿಗಳು, ಸದಸ್ಯರೂ, ಜಮಾಅತರು ಭಾಗವಹಿಸಿದರು
ಕೇರಳ, ಕರ್ನಾಟಕದಲ್ಲಿ ನೂರಕ್ಕಿಂತಲೂ ಹೆಚ್ಚು ಮೊಹಲ್ಲಾಗಳ ಖಾಝಿಗಳಾಗಿರುವ ಉಸ್ತಾದರು ಅಖಿಲ ಭಾರತ ಸುನ್ನೀ ಜಂಇಯತ್ತುಲ್ ಉಲಮಾ ಪ್ರ.ಕಾರ್ಯದರ್ಶಿ, ಮರ್ಕಝ್ ವಿಶ್ವ ವಿದ್ಯಾನಿಲಯದ ಕುಲಪತಿ, ಸಹಿತ ಹಲವಾರು ಸಂಘ ಸಂಸ್ಥೆಗಳ ನೇತೃ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ
ಸರಿ ಸುಮಾರು 5 ದಶಕಗಳಿಗಿಂತಲೂ ಹೆಚ್ಚು ಬಹುಮಾನ್ಯ ತಾಜುಲ್ ಉಲಮಾ ಉಳ್ಳಾಲ್ ತಂಙಲ್ ನಂತರ ಅವರ ಮಗ ಕೂರತ್ ತಂಙಲ್ ಕನ್ಯಾನ ಜಮಾಅತಿನ ಖಾಝಿಗಳಾಗಿದ್ದರು.
ಖಾಝಿ ಸ್ವೀಕಾರ ಸಮಾರಂಭಕ್ಕೆ ಅವಕಾಶ ಮಾಡಿಕೊಟ್ಟ ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮತ್ತು ಉಳ್ಳಾಲ ಜಮಾಅತ್ತರಿಗೆ ಕನ್ಯಾನ ಜಮಾಅತ್ತಿನ ಪರವಾಗಿ ದನ್ಯವಾದ ಸಲ್ಲಿಸಿದರು