October 22, 2025
WhatsApp Image 2024-08-24 at 5.40.53 PM

ಪುತ್ತೂರು: ಹೆಣ್ಣುಮಕ್ಕಳ ವಿಚಾರಕ್ಕೆ ಯುವಕನೊಬ್ಬನನ್ನು ತಂಡವೊಂದು ಮನೆಯೊಂದರಲ್ಲಿ ಕೂಡಿಹಾಕಿ ಯದ್ವಾತದ್ವಾ ಹಲ್ಲೆ ನಡೆಸಿರುವ ಘಟನೆ ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಬೊಳಂತೂರು ನಿವಾಸಿ ರಹೀಮ್ ಎಂಬಾತನ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದೆ. ಹುಡುಗಿಯ ವಿಚಾರವಾಗಿ ಯುವಕರ ತಂಡ ಆತನಿಗೆ ಥಳಿಸಿದೆ ಎನ್ನಲಾಗಿದೆ. “ಎಷ್ಟು ಹೆಣ್ಣುಮಕ್ಕಳ ಫೋಟೊ ನಿನ್ನ ಮೊಬೈಲ್‌ನಲ್ಲಿದೆ” ಎಂದು ಹೇಳಿ ಯದ್ವಾತದ್ವಾ ಥಳಿಸಿರುವ ಗುಂಪು ಮೊಬೈಲ್ ಲಾಕ್ ತೆಗೆಯುವಂತೆ ಒತ್ತಾಯಿಸಿರುವ ವೀಡಿಯೋ ವೈರಲ್ ಆಗಿದೆ.

ಯುವಕನಿಗೆ ಮಾರಣಾಂತಿಕವಾಗಿ ಥಳಿಸಿರುವುದನ್ನು ಅಲ್ಲಿಯೇ ಇದ್ದವರೇ ವೀಡಿಯೋ ಮಾಡಿದ್ದಾರೆ‌. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲಿ ಈತನಿಗೆ ಹೊಡೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪೊಲೀಸ್ ಮೂಲದ ಮಾಹಿತಿ ಪ್ರಕಾರ ಪುತ್ತೂರು ಯುವಕರ ತಂಡದಿಂದ ಥಳಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ಈವರೆಗೆ ದೂರು ದಾಖಲಾಗಿಲ್ಲ. ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

About The Author

Leave a Reply