Visitors have accessed this post 3046 times.
ಜ್ವರ ಬಳಲುತ್ತಿದ್ದ ನವವಿವಾಹಿತೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ.
ವಯನಾಡ್ ಅಂಕುಕುನ್ ಮೂಲದ ಶಹಾನಾ (21) ಮೃತ ನವವಿವಾಹಿತೆ ಇದೇ ತಿಂಗಳ 11ರಂದು ವೈತಿರಿ ಮೂಲದ ಅರ್ಷದ್ ಎಂಬವರ ಜತೆ ವಿವಾಹವಾಗಿದ್ದ ಶಹಾನಾರವರು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಜ್ವರ ತೀವ್ರಗೊಂಡಾಗ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಬೆಳಿಗ್ಗೆ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.