ಕಾಸರಗೋಡು: ನಾಪತ್ತೆಯಾಗಿದ್ದ ಪಿಗ್ಮಿ ಕಲೆಕ್ಷನ್ ಏಜೆಂಟರ್‌ ಶವವಾಗಿ ಪತ್ತೆ

ಕಾಸರಗೋಡು:ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಿಗ್ಮಿ ಕಲೆಕ್ಷನ್ ಏಜೆಂಟರ್‌ ರಮೇಶ್ ಬಿ . ಎನ್. (50) ಮೃತ ಪಟ್ಟ ಘಟನೆ ನಡೆದಿದೆ.

ಕಲ್ಲಕಟ್ಟ ಪಾಂಬಾಚಿ ಕಡವು ನಿವಾಸಿಯಾಗಿದ್ದ ರಮೇಶ್ ಬುಧವಾರ ರಾತ್ರಿ ಯಿಂದ ನಾಪತ್ತೆಯಾಗಿದ್ದರು. ಚಂದ್ರಗಿರಿ ಸೇತುವೆ ಬಳಿಯಿಂದ ಅಪರಿಚಿತ ವ್ಯಕ್ತಿ ಹಾರಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ, ಪೊಲೀಸರು ಮತ್ತು ಹಾಗೂ ಪರಿಸರವಾಸಿಗಳು ಶೋಧ ನಡೆಸಿದ್ದರು. ಶನಿವಾರ ಬೆಳಿಗ್ಗೆ ನೆಲ್ಲಿಕುಂಜೆ ಹಾರ್ಬರ್ ಸಮೀಪ ಸಮುದ್ರದಲ್ಲಿ ಮೃತ ದೇಹ ಪತ್ತೆ ಯಾಗಿವೆ.

ರಮೇಶ್ ಬಳಸುತ್ತಿದ್ದ ಸ್ಕೂಟರ್ ಚಂದ್ರಗಿರಿ ಸೇತುವೆ ಬಳಿ ಸ್ಕೂಟರ್ ಪತ್ತೆಯಾಗಿತ್ತು.ಸ್ಕೂಟರ್ ಪತ್ತೆಯಾದುದುರಿಂದ ಸಂಶಯಗೊಂಡು ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಳೆದ 32 ವರ್ಷಗಳಿಂದ ಸಹಕಾರಿ ಬ್ಯಾಂಕ್ ನ ಪಿಗ್ಮಿ ಕಲೆಕ್ಟರ್ ಆಗಿ ದುಡಿಯುತ್ತಿದ್ದರು. ಕಾಸರಗೋಡು ಠಾಣಾ ಪೊಲೀಸರು ಮಹಜರು ನಡೆಸಿದರು.

Leave a Reply