Visitors have accessed this post 1281 times.
ನವದೆಹಲಿ: ಕಳೆದ ಎರಡು ತಿಂಗಳಿನಂತೆ ಈ ಬಾರಿಯೂ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಹೌದು. ತೈಲ ಮಾರಾಟ ಕಂಪನಿಗಳು ಇಂದಿನಿಂದಲೇ (ಭಾನುವಾರ) ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು 39 ರೂಪಾಯಿ ಹೆಚ್ಚಿಸಿವೆ. ಪರಿಣಾಮ ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವು 1,691 ರೂಪಾಯಿಗೆ ಏರಿಕೆ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ. 14.2 ಕೆ.ಜಿಯ ಗೃಹ ಬಳಕೆ ಸಿಲಿಂಡರ್ ದರವು ಯಥಾಸ್ಥಿತಿಯಲ್ಲಿದೆ. ಹಾಗಾಗಿ ಗೃಹಬಳಕೆಯ ಸಿಲಿಂಡರ್ ಬೆಲೆ 805.50 ರೂಪಾಯಿ ಆಗಿ ಮುಂದುವರಿದಿದೆ. ಇದರಿಂದ ಗೃಹಿಣಿಯರು, ಮಧ್ಯಮ ವರ್ಗ, ಬಡವರ್ಗದ ಜನರು ನಿರಾಳರಾಗಿದ್ದಾರೆ. ಇಂದಿನಿಂದ ಚೆನ್ನೈನಲ್ಲಿ ವಾಣಿಜ್ಯ ಬಳಕೆಗಾಗಿ 19 ಕೆಜಿ ಅಡುಗೆ ಅನಿಲ ಸಿಲಿಂಡರ್ ಅನ್ನು 1,855 ರೂ.ಗೆ ಮಾರಾಟ ಮಾಡುವುದಾಗಿ ಘೋಷಿಸಿವೆ. ಅದೇ ರೀತಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕೋಲ್ಕತ್ತಾದಲ್ಲಿ 1,756 ರೂ. ಮತ್ತು ಮುಂಬೈನಲ್ಲಿ 1,598 ರೂ.ಗೆ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿಯೂ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ 38 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ 1769.50 ರೂಪಾಯಿಗೆ ಸಿಲಿಂಡರ್ ಸಿಗಲಿದೆ.