Visitors have accessed this post 332 times.
ಪುತ್ತೂರು: ಫೇಸ್‌ಬುಕ್‌ವೊಂದರಲ್ಲಿ ತನ್ನ ಸಂಬಂಧಿಕರ ಹೆಸರಿನಲ್ಲಿ ಮೆಸೆಂಜರ್‌ಗೆ ಬಂದ ಸಂದೇಶ ಅಸಲಿಯೆಂದು ನಂಬಿ ವ್ಯವಹಾರ ಮುಂದುವರಿಸಿ 10 ಸಾವಿರ ರೂ. ಕಳೆದುಕೊಂಡ ಘಟನೆ ಪುತ್ತೂರಿನ ಪೆರ್ಲಂಪಾಡಿಯಲ್ಲಿ ನಡೆದಿದೆ.
ಪುತ್ತೂರಿನಲ್ಲಿ ಉದ್ಯೋಗಿಯಾದ ಭರತ್ ಕುಮಾರ್ ಅವರಿಗೆ ಕೆಲವು ದಿನಗಳ ಹಿಂದೆ ‘ರಾಧಾಕೃಷ್ಣ ಎಂಬ ಹೆಸರಿನಲ್ಲಿ ಫೇಸ್ಟುಕ್ ಮನವಿ ಬಂದಿತ್ತು. ಪ್ರೊಫೈಲ್‌ನಲ್ಲಿದ್ದ ರಾಧಾಕೃಷ್ಣ ಅವರು ದೂರದ ಸಂಬಂಧಿ ಆಗಿದ್ದ ಕಾರಣ ಒಪ್ಪಿಗೆ ಸೂಚಿಸಿದ್ದರು. ಆ. 31ರಂದು ರಾಧಾಕೃಷ್ಣ ಅವರು ಮೆಸೇಂಜರ್ ಮೂಲಕ ಭರತ್‌ಗೆ, ಬೆಂಗಳೂರಿನಲ್ಲಿ ಸಿಆಪಿ ಯೋಧನಾಗಿರುವ ನನ್ನ ಮಿತ್ರನಿಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದೆ. ಅವರ ಮನೆಯಲ್ಲಿರುವ ಗೃಹೋ ಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ ಎಂದು ಆಂಗ್ಲ ಭಾಷೆಯಲ್ಲಿ ಸಂದೇಶ ಕಳುಹಿಸಿದ್ದರು.
ಇದಕ್ಕೆ ಓಕೆ ಎಂದಿದ್ದಕ್ಕೆ ನಂಬರ್ ಕಳುಹಿಸುವಂತೆ ಸೂಚಿಸಿದ್ದರು. ಭರತ್ ತಮ್ಮ ನಂಬರ್ ಕಳುಹಿಸಿದ್ದರು. ಸೆ. 1ರಂದು ಯೋಧ ಕರೆ ಮಾಡುತ್ತಾನೆ ಎಂದು ರಾಧಾಕೃಷ್ಣ ಅವರು ಮರು ಸಂದೇಶ ಕಳುಹಿಸಿದ್ದರು. ಸೆ. 1ರಂದು ಬೆಳಗ್ಗೆ 7.30ಕ್ಕೆ ಅಪರಿಚಿತ ಸಂಖ್ಯೆಯಿಂದ ಭರತ್ ಗೆ 2 ಬಾರಿ ಸಂದೇಶ ಕಳುಹಿಸಿ ಅಪರಿಚಿತ ತಾನು ಯೋಧ ಸಂತೋಷ್ ಎಂದು ಪರಿಚಯಿಸಿ ರಾಧಾಕೃಷ್ಣ ಅವರು ನಂಬರ್ ನೀಡಿದ್ದು ಎಂದ. ಮತ್ತೆ ಕರೆ ಮಾಡಿ ಮಾತುಕತೆ ನಡೆಸಿದ. ಇನ್‌ವರ್ಟರ್, ಡೈನಿಂಗ್ ಟೇಬಲ್, ಮಂಚ, ಎ.ಸಿ., ಟಿ.ವಿ., ಪ್ರಿಡ್ಜ್ ವಾಶಿಂಗ್‌ಮಿಶನ್ ಮೊದಲಾದ ವಸ್ತುಗಳಿದ್ದು 95 ಸಾವಿರ ರೂ. ಗೆ ನೀಡುವುದಾಗಿ ಹೇಳಿದ. ಜತೆಗೆ ಸಾಮಗ್ರಿಗಳ ಪೋಟೋ ಅನ್ನು ಕಳುಹಿ ಸಿದ್ದ ಇದನ್ನು ಕಂಡು ಖುಷಿಯದ ಭರತ್ ಮಾತು ಮುಂದುವರಿಸಿದರು.
ದರ ಕಡಿಮೆ ಮಾಡುವಂತೆ ಚೌಕಾಸಿ ನಡೆಯಿತು. ತತ್‌ಕ್ಷಣ 25 ಸಾವಿರ ರೂ. ಕಳುಹಿಸಲು ಸಂತೋಷ್ ಸೂಚಿಸಿದ. ಅಷ್ಟು ಹಣ ನನ್ನಲ್ಲಿ ಇಲ್ಲ. 10 ಸಾವಿರ ರೂ. ಕಳುಹಿಸುವೆ ಎಂದರು ಭರತ್. ಫೋನ್ ಪೇ ಅಥವಾ ಗೂಗಲ್ ಪೇ ಎಂದು ಕೇಳಿದ್ದಕ್ಕೆ ಭರತ್ ಫೋನ್ ಪೇ ಎಂದರು. ತತ್‌ಕ್ಷಣ ಸಂತೋಷ್ ದೂರವಾಣಿ ಸಂಖ್ಯೆಯನ್ನು ಹೇಳಿದ.
ಈ ನಂಬರ್ ನಲ್ಲಿ ಬಾಬುಲಾಲ್ ಎಂಬ ಹೆಸರು ಎಂದು ಬಂದಿದ್ದು. ಭರತ್ ತಮ್ಮ ತಂದೆ ಬಾಲಕೃಷ್ಣ ಅವರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ ವರ್ಗಾಯಿಸಿದರು. ಹಣ ಸಂದಾಯದ ಬಳಿಕ ಸ್ಕ್ರೀನ್ ಶಾಟ್ ಕಳುಹಿಸಲು ಸೂಚಿಸಿದ್ದ ಬಾಬುಲಾಲ್ ಹೆಸರಿಗೆ ಹಣ ಸಂದಾಯ ಆದ ದ್ದನ್ನು ಖಚಿತ ಪಡಿಸಿದ ಬಳಿಕ ಸಂತೋಷ್ ಕರೆ ಕಡಿತಗೊಳಿಸಿದ್ದ ಇದಾದ ಹತ್ತೇ ನಿಮಿಷದಲ್ಲಿ ಸಿಆರ್‌ಪಿ. ಇಲಾಖೆಯ ವಾಹನದಲ್ಲೇ ಗೃಹೋಪಯೋಗಿ ವಸ್ತುಗಳನ್ನು ಕಳುಹಿಸಲಾಗುತ್ತಿದೆ ಎಂದು ಸಂತೋಷ್ ಫೋಟೋ ಸಹಿತ ಸಂದೇಶ ಕಳುಹಿಸಿದ.
ಅದನ್ನು ಕಂಡು ಭರತ್‌ಗೆ ಸಂಶಯ ಮೂಡಿತು. ಅಷ್ಟರಲ್ಲಿ ಪದೇಪದೆ ಕರೆ ಮಾಡಿ ಉಳಿದ ಹಣ ಯಾವಾಗ ಹಾಕುತ್ತೀರಿ ಎಂದು ಸಂತೋಷ ಪ್ರಶ್ನಿಸಿದ. ಪೇಟೆಗೆ ಹೋಗಿ ಹಾಕುವೆ ಎಂದು ಭರತ್ ಹೇಳಿದಾಗ ಮತ್ತೆ ಮತ್ತೆ ಕರೆ ಮಾಡಿದ. ಆಗ ತಾವು ವಂಚನೆಗೊಳಗಾದದ್ದು ಭರತ್‌ಗೆ ತಿಳಿಯಿತು. ತನಗೆ ಮೆಸೇಂಜರ್‌ನಲ್ಲಿ ಸಂದೇಶ ಕಳುಹಿ ಸಿದ ರಾಧಾಕೃಷ್ಣ ಖಾತೆಯನ್ನು ಪರಿಶೀಲಿಸಿ ತಮ್ಮ ಸಂಬಂಧಿಕರ ಮೂಲಕ ಭರತ್ ಅವರ ನಂಬರ್ ಪಡೆದ. ರಾಧಾಕೃಷ್ಣ ಅವರಿಗೆ ಕರೆ ಮಾಡಿದ ಸಂದರ್ಭ ಇದು ನಕಲಿ ಫೇಸ್‌ಬುಕ್ ಖಾತೆ’ ಎಂಬ ಆಂಶ ತಿಳಿಯಿತು.
ಕೆಲವು ದಿನಗಳಿಂದ ತನ್ನ ಹೆಸರಿನಲ್ಲಿನಕಲಿ ಸೃಷ್ಟಿಯಾಗಿತ್ತು. ಭರತ್‌ಗೆ ಸೈಬರ್ ಕೈಂನಲ್ಲಿ ದೂರು ದಾಖಲಿಸುತ್ತಾರೆ. ಸೆ. 1ರಂದು ಸಂಜೆ ವೇಳೆ ರಾಧಾಕೃಷ್ಣ ಅವರ ಹೆಸರಿನ ನಕಲಿ ಖಾತೆಯು ನಿಷ್ಕ್ರಿಯವಾಗಿತ್ತು. ಸಂತೋಷ್ ಎಂಬ ಹೆಸರಿನಲ್ಲಿ ಕರೆ ಮಾಡಿದ ನಂಬರ್ ಕೂಡ ಬ್ಲಾಕ್ ಆಗಿದೆ. ಆದರೆ ಹಣ ಪಾವತಿಸಿದ ಬಾಬುಲಾಲ್ ಅವರ ನಂಬರ್ ಚಾಲ್ತಿಯಲ್ಲಿದೆ. :