Visitors have accessed this post 663 times.

ಮಂಗಳೂರು: ‘ಬುದ್ದಿವಂತ’ ಸಿನಿಮಾ ಶೈಲಿಯಲ್ಲಿ ಹಲವು ಮಹಿಳೆಯರಿಗೆ ವಂಚನೆ, ಮುಂಬೈನಲ್ಲಿ ‘ಖತರ್ನಾಕ್ ಆರೋಪಿ’ ಅರೆಸ್ಟ್..!

Visitors have accessed this post 663 times.

ಮಂಗಳೂರು : ‘ಬುದ್ದಿವಂತ’ ಚಿತ್ರದ ಮಾದರಿಯಲ್ಲಿ ಹಲವು ಮಹಿಳೆಯರಿಗೆ ವಂಚನೆ ಎಸಗುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಕ್ರಿಶ್ಚಿಯನ್ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದು, ಬುದ್ದಿವಂತ’ ಚಿತ್ರದ ಮಾದರಿಯಲ್ಲಿ ಈತ ಕೃತ್ಯ ಎಸಗುತ್ತಿದ್ದನು. ಸೋಶಿಯಲ್ ಮೀಡಿಯಾಗಳ ಮೂಲಕ ಮಹಿಳೆಯರ ಸಂಪರ್ಕಕ್ಕೆ ಬಂದು ಅವರ ಸ್ನೇಹ ಬೆಳೆಸಿ ನಂತರ ಅವರ ಮನೆಗೆ ಹೋಗುತ್ತಿದ್ದನು. ಅಲ್ಲಿ ಮಹಿಳೆಯ ಜೊತೆ ಸರಸ ಸಲ್ಲಾಪ ನಡೆಸಿ ಬಳಿಕ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದನು. ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿ ಮೋಸ್ಟ್ ವಾಂಟೆಂಡ್ ಆಗಿದ್ದ ಆರೋಪಿ ಮಥಾಯೀಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಶ್ರೀಮಂತ ಮಹಿಳೆಯರೇ ಈತನ ಟಾರ್ಗೆಟ್ ಆಗಿರುತ್ತಿತ್ತು. ಯಾಕೆಂದರೆ ಈತ ಕೂಡ ಕ್ರಿಶ್ಚಿಯನ್ ಆಗಿದ್ದು, ಕೊಂಕಣಿ ಭಾಷೆಯಲ್ಲಿ ಚೆಂದ ಚೆಂದದ ಮಾತನಾಡಿ ಅವರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದನು. ಮಂಗಳೂರು-ಉಡುಪಿ ಭಾಗದಲ್ಲಿ ಈತ ಕೃತ್ಯ ಎಸಗಿ ಎಸ್ಕೇಪ್ ಆಗುತ್ತಿದ್ದನು. ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿ ಮೋಸ್ಟ್ ವಾಂಟೆಂಡ್ ಆಗಿದ್ದ ಮಥಾಯೀಸ್ ಕೋರ್ಟ್ ಗೆ ವಿಚಾರಣೆಗೆ ಹಾಜರಾಗದೇ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದನು. ಮಹಿಳೆಯೊಬ್ಬರ ಮನೆಯಲ್ಲಿ ಪೊಲೀಸರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Leave a Reply

Your email address will not be published. Required fields are marked *