

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಪೇರ್ಲಗುರಿ ಬಳಿ ಓವರ್‌ಟೇಕ್ ವಿಚಾರದಲ್ಲಿ ಸಾರ್ವಜನಿಕವಾಗಿ ಬೈದಾಡಿದ ಹೊಡೆದಾಡಿಕೊಂಡ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಕಣ ದಾಖಲಾಗಿದೆ.ಮಂಜುನಾಥ ಶೆಟ್ಟಿ (44) ಮತ್ತು ದೀಪಕ್ ರಾವ್ (31) ವಾಹನಗಳ ಓವರ್‌ಟೇಕ್ ವಿಚಾರದಲ್ಲಿ ಪರಸ್ಪರ ಮೈಮೆಲೆ ಕೈಹಾಕಿಕೊಂಡು ಹೊಡೆದಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕವಾಗಿ ಕಲಹ ಮಾಡಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಎಎಸ್ಸೈ ರಾಮಣ್ಣ ಶೆಟ್ಟಿ ನೀಡಿದ ದೂರಿನಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






