Visitors have accessed this post 620 times.
ಮಂಗಳೂರು: ಸ್ಪೀಕರ್ ಯುಟಿ ಖಾದರ್ ಅವರು ಜೀಪ್‌ನಲ್ಲಿ ಬಿಂದಾಸ್ ಆಗಿ ಆಫ್-ರೋಡ್ ಡ್ರೈವ್ ಮಾಡಿ ಎಲ್ಲಾರ ಗಮನಸೆಳೆದಿದ್ದಾರೆ. ಕೆಎ 19-20 ಯುನೈಟೆಡ್ ಆಫ್ರೋಡರ್ ಆಯೋಜಿಸಿರುವ ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆ ಮಂಗಳೂರಿನ ಮುಡಿಪು ನವೋದಯ ಶಾಲೆಯ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 21 ಮತ್ತು 22 ರಂದು ನಡೆಯಲಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ದೊಡ್ಡಮಟ್ಟಿನ ಆಫ್ ರೋಡಿಂಗ್ ಸ್ಪರ್ಧೆ ಆಯೋಜಿಸಲಾಗಿದೆ. ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.