Visitors have accessed this post 1655 times.

ಯಜಮಾನಿಯರಿಗೆ ಬಿಗ್ ಶಾಕ್ : ಇನ್ಮುಂದೆ ಇವರಿಗೆ ಬರಲ್ಲ `ಗೃಹಲಕ್ಷ್ಮಿ’ ಹಣ!

Visitors have accessed this post 1655 times.

ರಾಜ್ಯ ಸರ್ಕಾರದಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳೂ 2000 ಪಡೆಯುತ್ತಿದ್ದಂತ 1.78 ಲಕ್ಷ ಯಜಮಾನಿಯರಿಗೆ ಹಣ ಪಾವತಿ ಮಾಡದಂತೆ ತಡೆ ಹಿಡಿಯಲಾಗಿದೆ. ಈ ಮೂಲಕ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಲಾಗಿದೆ.

 

ಗೃಹ ಲಕ್ಷ್ಮೀ ಯೋಜನೆಯ ನಿಯಮಾನುಸಾರ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯಡಿ ಪ್ರಯೋಜನ ಸಿಗುವುದಿಲ್ಲ. ಆದರೂ ಯೋಜನೆಗೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ 1.78 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡು, 2000 ಪಡೆಯುತ್ತಿದ್ದಂತ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತನಿಖೆ ಕೈಗೊಂಡು, ಪರಿಶೀಲನೆ ನಡೆಸಿದ ಕಾರಣ, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಂತ ಮಹಿಳೆಯರಿಗೆ ಹಣ ಪಾವತಿ ನಿಲ್ಲಿಸಲಾಗಿದೆ. ಅಲ್ಲದೇ ದಾಖಲೆ ಪರಿಶೀಲನೆಗೆ ಚಾಲನೆ ನೀಡಲಾಗಿದೆ. ಇ-ಗವರ್ನೆನ್ಸ್ ಇಲಾಖೆಗೆ ತನಿಖೆ ನಡೆಸಲು ಮಹಿಳಾ ಇಲಾಖೆ ಸೂಚಿಸಿದೆ.

ಈ ಕಾರಣದಿಂದಾಗಿ ರಾಜ್ಯದಲ್ಲಿ ತೆರಿಗೆ ಪಾವತಿದಾರರಾದ ಕಾರಣ 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮೀ ಹಣಕ್ಕೆ ತಡೆಯನ್ನು ಇಲಾಖೆ ನೀಡಿ, ಬಿಗ್ ಶಾಕ್ ನೀಡಲಾಗಿದೆ.

Leave a Reply

Your email address will not be published. Required fields are marked *