
ಕುಂದಾಪುರ: ಸುಮಾರು 15 ವರ್ಷಗಳಿಂದ ಕುಂದಾಪುರ ಹೃದಯ ಭಾಗದಲ್ಲಿ ಅಂತರಾಷ್ಟ್ರೀಯ ವೈಟ್ ಲಿಫ್ಟಿಂಗ್ ಕ್ರೀಡಾಪಟು ಸತೀಶ್ ಕಾರ್ವಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಹರ್ಕ್ಯುಲಸ್ ಜಿಮ್ & ಫಿಟ್ ನೆಸ್ಸ್ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರು ಮಾಡಿ ಯಶಸ್ವಿಯಾಗಿದ್ದ ಸಂಸ್ಥೆಗೆ ದಿನಾಂಕ 01-09- 2024 ರಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದು ಸಂಸ್ಥೆಯ ಬಗ್ಗೆ ಪ್ರಶಂಷನೀಯವಾದ ಮಾತುಗಳನ್ನಾಡಿದರು. ಯೋಗೀಶ್ ಶೆಟ್ಟಿ ಜಪ್ಪು ರವರ ಜೊತೆ ತುಳುನಾಡ ರಕ್ಷಣಾ ವೇದಿಕೆ ರಾಜ್ಯ ವೈದ್ಯರ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ ,ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ ಕೊಳಲಗಿರಿ ಮತ್ತಿತರರು ಉಪಸ್ಥಿತರಿದ್ದರು


