ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂಚಾಯತಿಗೆ ತೆರವಾದ ಸ್ಥಾನಕ್ಕೆ ಇದೇ ನವೆಂಬರ್ 23 ಕ್ಕೆ ಉಪಚುನಾವಣೆ ನಡೆಯಲಿದ್ದು,ಪಕ್ಷದ ಕಾರ್ಯಚಟುವಟಿಕೆ,ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಗೆಲುವಿಗೆ ಸಹಕಾರಿಯಾಗಲು,ಚುನಾವಣೆಗೆ ಬಲವರ್ಧನೆ ನೀಡುವ ಉದ್ದೇಶದಿಂದ ದ.ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅದ್ಯಕ್ಷರೂ,ಜಿಲ್ಲೆಯ ಗ್ರಾ.ಪಂಚಾಯತ್ ಉಪಚುನಾವಣೆಯ ಉಸ್ತುವಾರಿ ಸಂಚಾಲಕರಾಗಿರುವ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಬೇಟಿ ನೀಡಿ ಪಕ್ಷದ ಬೆಂಬಲಿತ ಸದಸ್ಯರನ್ನು ಗೆಲ್ಲಿಸಲು ಪಣತೋಡಬೇಕು ಎಂದು ಕರೆಯಿತ್ತರು,ಅಲ್ಲದೆ ಅಭ್ಯರ್ಥಿಗಳಿಗೆ ಶುಭಾಶಯ ಸಲ್ಲಿಸಿ, ಪಧಾದಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ,ಪುತ್ತೂರು ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅದ್ಯಕ್ಷರಾದ ಸಂತೋಷ್ ಭಂಡಾರಿ ಸಹಿತ ಇನ್ನಿತರರು ಉಪಸ್ಥಿತರಿದ್ದರು.