August 19, 2026
WhatsApp Image 2024-11-23 at 12.03.18 PM
 ಮಂಗಳೂರು :  ಮೂರು ವರ್ಷದ ಪುಟಾಣಿ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ವೃದ್ಧನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತ ಆರೋಪಿಯನ್ನು ಮುದುಂಗಾರುಕಟ್ಟೆ ನಿವಾಸಿ ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ. ಆರೋಪಿ ವ್ಯಕ್ತಿ ಅಡಿಕೆ ಖರೀದಿ ಅಂಗಡಿಯನ್ನು ಹೊಂದಿದ್ದು, ನವೆಂಬರ್ 21ರಂದು ಅಂಗಡಿ ಬಳಿಯಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗುವಿಗೆ ಕಿರುಕುಳ ಕೊಟ್ಟಿದ್ದಾನೆಂದು ಆರೋಪಿಸಲಾಗಿದೆ. ಮಗು ಅಸಹಜವಾಗಿ ವರ್ತಿಸಿದ್ದರಿಂದ ಮಗುವಿನ ತಾಯಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಕೋಣಾಜೆ ಠಾಣೆಗೆ ತೆರಳಿ ಮಗುವಿನ ತಾಯಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್ 65 ಪ್ರಕಾರ ಕೇಸು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

About The Author

Leave a Reply