
ಪುತ್ತೂರು ಡಿ. 05: ಜಿಲ್ಲೆಯಲ್ಲೇ ಎರಡನೇ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಬೇಕಾದ ವೈದ್ಯರು ಇಲ್ಲದೆ ಇರುವುದು ಅತ್ಯಂತ ಹೀನಾಯ ಸ್ಥಿತಿ ಅನ್ನಬಹುದು. ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆಂದು ಸುಳ್ಯ , ಪುತ್ತೂರು , ಕಡಬ, ಉಪ್ಪಿನಂಗಡಿ,ಬೆಳ್ತಂಗಡಿ,ವಿಟ್ಲ ಭಾಗಗಳಿಂದ ಪುತ್ತೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಬಂದು ಪರೀಕ್ಷೆ ನಡೆಸಿದ ನಂತರ ಆಸ್ಪತ್ರೆಯಲ್ಲಿ ನೀವು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರಿಲ್ಲ ಎಂಬ ಉತ್ತರ. ರೋಗಿಯು ಅದೇ ರೀತಿ ಅವರ ಕಡೆಯವರು ದಿಕ್ಕು ತೋಚದೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗ ಬೇಕಾದ ಅನಿವಾರ್ಯತೆ ಕಂಡು ಬರುತ್ತಿದೆ. ಆದ್ದರಿಂದ ಶೀಘ್ರದಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸಾ ವೈದ್ಯರ ನೇಮಕಗೊಳಿಸಲು ಒತ್ತಡ ಹೇರಿ ಜನ ಸಾಮಾನ್ಯರಿಗೆ ಉಪಯೋಗ ಆಗುವಂತೆ ಮಾಡಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಲಾಯಿತು.



ಈ ಸಂದರ್ಭದಲ್ಲಿ ನಗರ ಸಮಿತಿ ಅಧ್ಯಕ್ಷರಾದ ಯಹ್ಯಾ ಕೂರ್ನಡ್ಕ ಕಾರ್ಯದರ್ಶಿ ನಿಶಾದ್ ಡಿಕೆ ಮತ್ತಿತರರು ಉಪಸ್ಥಿತರಿದ್ದರು.