
ಕಾಸರಗೋಡು: ಕರಿವೇಡಗಂ ಪಡ್ಪು ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬಳು ಮೂರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ.



ಅಬ್ದುಲ್ ಹಕೀಂ ಅವರ ಪತ್ನಿ ಜನತ್ತುಲ್ ನಿಶಾ (29) ಮತ್ತು 11, 9 ಮತ್ತು 8 ವರ್ಷ ಪ್ರಾಯದ ಮಕ್ಕಳು ನಾಪತ್ತೆಯಾಗಿದ್ದಾರೆಂದು ಬೇಡಗಂ ಪೊಲೀಸರಿಗೆ ದೂರು ನೀಡಲಾಗಿದೆ.
ಡಿ.24 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.