ಕನ್ಯಾನ: ಗವನ್ಗಾರ್ ಕುಟುಂಬದ ಧಾರ್ಮಿಕ ಅನುಷ್ಟಾನ ಅಭಿವೃದ್ಧಿ ಸಾಧನಾ ಪ್ರತಿಷ್ಟಾನ(ರಿ) ಬುಳೇರಿಕಟ್ಟೆ ಪುತ್ತೂರು. ಶ್ರೀ ಮಹಮ್ಮಾಯಿ ದೇವಿಯ ಪೂಜೆ ಹಾಗೂ ಪರಿವಾರ ದೈವಗಳ ನೇಮೋತ್ಸವ ದಿನಾಂಕ 11/ 1/ 2025 ಶನಿವಾರ ಬುಳೇರಿಕಟ್ಟೆ ತರವಾಡು ಮನೆಯಲ್ಲಿ ನಡೆಯಲಿದೆ.
ಈ ದಾರ್ಮಿಕ ಕಾರ್ಯಕ್ರಮದಲ್ಲಿ ಗವನ್ಗಾರ್ ಕುಟುಂಬದ ಸಮಸ್ತರು ಹಾಗೂ ನೆಂಟರು ಬಂಧು ಮಿತ್ರರು ಮತ್ತು ಊರಿನ ಸಮಸ್ತರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಮಹಮ್ಮಾಯಿ ಅಮ್ಮನವರ ಪೂಜಾ ಕಾರ್ಯಕ್ರಮ ಮತ್ತು ಅದೇ ದಿನ ಸಂಜೆ ಗಂಟೆ 7:30ಕ್ಕೆ ಸರಿಯಾಗಿ ನಡೆಯುವ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ.
ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಪರಿವಾರ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ.ಶ್ರೀ ದೈವ ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಶ್ರೀ ಶಿವಣ್ಣ ನಾಯ್ಕ ಅನೆಕಲ್ಲು ಮತ್ತು ಗಂಗಾಧರ ನಾಯ್ಕ ಕನ್ಯಾನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.