May 18, 2026
image - 2026-05-18T170127.238

ಗ್ರೇಟರ್ ನೋಯ್ಡಾ: ಮದುವೆಯಾಗಿ ಕೇವಲ 17 ತಿಂಗಳಾಗಿದ್ದ 25 ವರ್ಷದ ಯುವತಿಯೊಬ್ಬರು ಅತ್ತೆಯ ಮನೆಯ ಛಾವಣಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಜಲ್ಪುರಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ವರದಕ್ಷಿಣೆ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಕಣ್ಣೀರು ಹಾಕಿದ್ದಾರೆ.

ಮೃತ ಯುವತಿಯನ್ನು ದೀಪಿಕಾ ನಾರಂಗ್ ಎಂದು ಗುರುತಿಸಲಾಗಿದೆ. ಇಕೋ ಟೆಕ್-III ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. 2024ರ ಡಿಸೆಂಬರ್‌ನಲ್ಲಿ ದೀಪಿಕಾ ಅವರ ವಿವಾಹವು ರಿತಿಕ್ ತನ್ವರ್ ಎಂಬಾತನೊಂದಿಗೆ ಅದ್ಧೂರಿಯಾಗಿ ನೆರವೇರಿತ್ತು. ಮದುವೆಗಾಗಿ ದೀಪಿಕಾ ಕುಟುಂಬದವರು ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿದೆ.

About The Author

Leave a Reply