ಮಸೀದಿಯ ಕಾಣಿಕೆ ಹುಂಡಿ ಒಡೆದು ಕಳ್ಳತನ

ಬಂಟ್ವಾಳ: ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಕಾಣಿಕೆ ಹುಂಡಿಯನ್ನು ಶನಿವಾರ ರಾತ್ರಿ ಕಳ್ಳರು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ಹರಕೆ ಹಣವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.

ಆದಿತ್ಯವಾರ ಬೆಳಿಗ್ಗೆ ಮದ್ರಸಾ ತರಗತಿಗೆ ಬಂದ ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ಘಟನೆ ನಡೆದ ಬಗ್ಗೆ ಗಮನಕ್ಕೆ ಬಂದಿದ್ದು ಮಧ್ಯರಾತ್ರಿ ವೇಳೆ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ.

Leave a Reply