
ದುಬೈ: ಉಡುಪಿ ಜಿಲ್ಲೆಯ ಶಿರೂರು ಮೂಲದ ನಾಖುದಾ ಸಮುದಾಯದವರ “ಪ್ರವಾಸಿ ನಾಖುದಾ ಶಿರೂರು” ಸಂಘಟನೆಯು ಪ್ರಥಮ ವಾರ್ಷಿಕೋತ್ಸವ ಹಾಗೂ ಮರಹಬಾ ರಂಜಾನ್ ಕುಟುಂಬ ಸ್ನೇಹ ಸಮ್ಮಿಲನ ಕೂಟವನ್ನು ಫೆಬ್ರವರಿ 23ರಂದು ದುಬೈನ ಅಲ್ ರಶೀದಿಯಾ ಪಾರ್ಕ್ ನಲ್ಲಿ ಅದ್ಧೂರಿಯಿಂದ ಆಯೋಜಿಸಿದರು.



ಈ ಕಾರ್ಯಕ್ರಮವು ನಾಖುದಾ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿತು. ನಾಖುದಾ ಸಮುದಾಯದ ಸಾಂಸ್ಕೃತಿಕ ಮನರಂಜನೆ, ವಿವಿಧ ಕ್ರೀಡೆಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ. ಸರಿಸುಮಾರು 200 ನಾಖುದಾ ಸಮುದಾಯದ ಸದಸ್ಯರು ಈ ಸಾಂಸ್ಕೃತಿಕ ಕಾರ್ಯಕ್ರಮದಲಿ ಭಾಗವಹಿಸಿದರು. ಈ ಸಾಂಸ್ಕೃತಿಕ ಸ್ನೇಹ ಸಮ್ಮಿಲ ಕಾರ್ಯಕ್ರಮವು ಪುರುಷರಿಗಾಗಿ, ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕ್ರೀಡೆ ಮತ್ತು ಮನೋರಂಜನೆ ಮೋಜಿನ ಚಟುವಟಿಕೆಗಳಿಂದ ತುಂಬಿತು. ಎಲ್ಲಾ ವಿಜೇತರರಿಗೆ ಮತ್ತು ಭಾಗವಹಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಮತ್ತು ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನದ ನಾಯಕರು ಮತ್ತು ಶಿರೂರು ಅಸೋಸಿಯೇಷನ್ನಾಯಕರು ಹಾಗು ಮುರ್ಡೇಶ್ವರ ಮತ್ತು ತೆಂಗಿನಗುಂಡಿ ಜಮಾತಿನ ನಾಯಕರು ಭಾಗವಹಿಸಿದರು. ಅತಿಥಿಗಣ್ಯರು ಪ್ರವಾಸಿ ನಾಖುದರವರ ಕಾರ್ಯಕ್ರಮದ ಕಾರ್ಯ ವೈಖರಿ ಮತ್ತು ಶಿಸ್ತುನ್ನು ಶ್ಲಾಘನಿಸಿದರು ಹಾಗು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಭಾರತದ 78ನೇ ಸ್ವಾತಂತ್ರ್ಯ ದಿವಸ ಆಚರಣೆದಂದು ” Solidarity is in our blood – ಒಗ್ಗಟ್ಟು ನಮ್ಮ ರಕ್ತದಲ್ಲಿದೆ” ಎಂದು ಪ್ರಮಾಣ ವಚನ ಸ್ವೀಕರಿಸಿದವರು. ಕರ್ನಾಟಕ ರಾಜ್ಯೋತ್ಸವದಂದು ರಕ್ತದಾನ ಮಾಡಿ ಮಾನವೀಯತೆ ಮೆರೆದದವರಿಗೆ ಅತಿಥಿಗಳಿಂದ ಸನ್ಮಾನಿಸಲಾಯಿತು.
ಸಮುದಾಯದ ಸದಸ್ಯರು ಸಾಮಾಜಿಕ-ಕಲ್ಯಾಣ, ಸಂಪರ್ಕಗಳನ್ನು ಬೆಳೆಸುವ ಮತ್ತು ಸಹೋದರ ಸಂಬಂಧಗಳನ್ನು ಬಲಪಡಿಸುವ ಆಲೋಚನೆಗಳು ಚರ್ಚಿಸಲು ವೇದಿಕೆಯಲ್ಲಿ ಒಟ್ಟುಗೂಡಿದರು. ಪ್ರತಿಯೊಬ್ಬ ಸದಸ್ಯರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು, ಸಮುದಾಯದ ಎಲ್ಲಾ ಸದಸ್ಯರು ವಿಶೇಷವಾಗಿ ಹಿರಿಯ ಸದಸ್ಯರು ತಮ್ಮ ಸಂತೋಷ ಭಾವನೆಗಳನ್ನು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಯೋಜಕರಾದ ಪ್ರವಾಸಿ ನಾಖುದಾ ಶಿರೂರು ಆಡಳಿತ ಬಳಗಕ್ಕೆ ಧನ್ಯವಾದ ಅರ್ಪಣೆಯೊಂದಿಗೆ ನಾಖುದಾ ಸಮುದಾಯ ಪ್ರಥಮ ವಾರ್ಷಿಕೋತ್ಸವ ಹಾಗೂ ಮರಹಬಾ ರಂಜಾನ್ ಕುಟುಂಬ ಸ್ನೇಹ ಸಮ್ಮಿಲ ಮುಕ್ತಾಯ ಗೊಂಡಿತು.