May 7, 2026
wmremove-transformed
ಉಡುಪಿ: ಹೊಸದಾಗಿ ಖರೀದಿಸಿದ ಎಸ್‌ಯುವಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರದಲ್ಲಿರುವ ಕಿಯಾ ಶೋ ರೂಂ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.ಹರಿಯಾಣ ಮೂಲದ ವ್ಯಕ್ತಿಗೆ ಸೇರಿದ್ದು ಎನ್ನಲಾದ ಈ ವಾಹನವನ್ನು ಕೆಲವೇ ದಿನಗಳ ಹಿಂದೆ ಖರೀದಿಸಲಾಗಿತ್ತು. ಕಾರು ಮಂಗಳೂರಿನಿಂದ ಹರಿಯಾಣ ಕಡೆಗೆ ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಕಾರು ಮತ್ತು ಡಿವೈಡರ್‌ನಲ್ಲಿದ್ದ ಕ್ರಾಶ್ ಗಾರ್ಡ್‌ಗೆ ಗಣನೀಯ ಹಾನಿಯಾಗಿದೆ. ಘಟನೆಯ ಬಗ್ಗೆ ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply