

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ತಲಪಾಡಿಯಲ್ಲಿರುವ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಗೆ ‘Most Socially Active School of 2026’ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಯಲಹಂಕದಲ್ಲಿರುವ ರಮದ ಬೈ ವಿಂಡ್ಹ್ಯಾಮ್ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಶಿಕ್ಷಣ ನೀತಿ ಮಂಡಳಿಯ ಪ್ರೊ. ಉರ್ಮಿ ಚಕ್ರವರ್ತಿ ಮತ್ತು ನ್ಯಾಷನಲ್ ಸ್ಕೂಲ್ ಅವಾರ್ಡ್ ಅಸೋಸಿಯೇಷನ್ ಇದರ ಸಂಸ್ಥಾಪಕ ಸದಸ್ಯೆ ಶಿಖಾ ದಿಲ್ಲನ್ ಅವರು ಡೈಮಂಡ್ ಶಾಲೆಯ ಟ್ರಸ್ಟಿಗಳಾದ ಸಲೀಂ ಅಲ್ತಾಫ್ ಮತ್ತು ಸನಾ ಅಲ್ತಾಫ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಹನ್ನೊಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಯು ಸಿಬಿಎಸ್ಇ ಪಠ್ಯಕ್ರಮದೊಂದಿಗೆ ಇಸ್ಲಾಮಿಕ್ ಶಿಕ್ಷಣ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹದ ಜೊತೆಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಾಮಾಜಿಕ ಚಿಂತನೆಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.






