April 21, 2026
WhatsApp Image 2025-07-31 at 9.26.13 AM

ಬಂಟ್ವಾಳ : ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಸಾವನ್ನಪ್ಪಿದ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಡ್ಲೆ ಪಟೇಲ್ ಮೃತಪಟ್ಟವರು.

ಲಾಡ್ಲೆ ಪಟೇಲ್ ಸುಮಾರು 16 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಿ.ಸಿ.ರೋಡ್ ಡಿಪೋದಲ್ಲಿ ಚಾಲಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಎ.18ರಂದು ಬೆಳಗ್ಗೆ ಕರ್ತವ್ಯ ಸಲ್ಲಿಸಿ ಡಿಪೋದ ವಿಶ್ರಾಂತಿ ಗೃಹದಲ್ಲಿ ವಿಶ್ರಾಂತಿ ಪಡೆದು, ಸಂಜೆ ಸುಮಾರು 7.15ಕ್ಕೆ ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ.

ಕೂಡಲೇ ಚಿಕಿತ್ಸೆಗೆ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ ಸಾವನ್ನಪ್ಪಿದ್ದಾಗಿ ಅವರ ಭಾವ ಸದ್ದಾಂ ಹುಸೇನ್ ತಿಳಿಸಿದ್ದಾರೆ.

About The Author

Leave a Reply