April 30, 2026
WhatsApp Image 2026-04-30 at 10.10.37 AM

ಬೆಂಗಳೂರಿನಲ್ಲಿ ಬಾರಿ ಗಾಳಿ ಮಳೆಗೆ ಅವಾಂತರ ಸೃಷ್ಟಿಯಾಗಿ ನಿನ್ನೆ ಹತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ಘಟನೆ ನಡೆದಿದೆ ಬೆಂಗಳೂರು ಅಷ್ಟೇ ಅಲ್ಲದೆ ಮಂಡ್ಯದಲ್ಲಿ ಕೂಡ ರಾತ್ರಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಅವಾಂತರ ಸೃಷ್ಟಿಯಾಗಿದ್ದು, ಬಾರಿ ಬಿರುಗಾಳಿಗೆ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನದ ಪೆಂಡಾಲ್ ಕುಸಿತವಾಗಿದೆ. ಮಂಡ್ಯದ ವಿವಿ ಆವರಣದಲ್ಲಿ ಘಟನೆ ನಡೆದಿದೆ.

ಹಾಗಾಗಿ ಮಂಡ್ಯದ ವಿ.ವಿ ಆವರಣದಲ್ಲಿ ನಡೆಯಬೇಕಿದ್ದ ನವವಸಂತ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಲಾಗಿದೆ. ಇಂದಿನ ಎಲ್ಲಾ ಕಾರ್ಯಾಕ್ರಮವನ್ನು ತಾತ್ಕಾಲಿಕ ರದ್ದು ಮಾಡಿ ಮುಂದೂಡಿಕೆ ಮಾಡಿದ್ದು, ಇಂದು ನಡೆಯಬೇಕಿದ್ದ ಮಂಡ್ಯ ವಿವಿ ಪ್ರವೇಶದ್ವಾರ ಹಾಗು ಎರಡು ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮವನ್ನು ಕೃಷಿ ಸಚಿವ ಚಲುವರಾಯ ಸ್ವಾಮಿಯಿಂದ ನೆರವೇರಬೇಕಿದ್ದ ಶಂಕುಸ್ಥಾಪನೆ ನಡೆಯಬೇಕಿತ್ತು.

ಅಕಾಲಿಕ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನದ ಪೆಂಡಾಲ್ ಕುಸಿತ.

ಕಾರ್ಯಕ್ರಮ ನಡೆಯಬೇಕಿದ್ದ ವಿವಿ ಕ್ರೀಡಾಂಗಣದಲ್ಲಿ ಒದ್ದೆಯಾಗಿ ನೀರು ನಿಂತಿರೋದ್ದಕ್ಕೆ ಕಾರ್ಯಕ್ರಮ ರದ್ದು ಪಡಿಸಲಾಗಿದೆ. ಕಾರ್ಯಕ್ರಮ ರದ್ದುಗೊಳಿಸಿ ಮುಂದೂಡಿಕೆ ಬಗ್ಗೆ ಶಾಸಕ ಗಣಿಗ ರವಿಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಮಂದಿನ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿಕೆ ನೀಡಿದರು.

About The Author

Leave a Reply