May 2, 2026
WhatsApp Image 2026-05-02 at 12.25.05 PM

ನನ್ನ ಹೆಸರು ಸತ್ಯ ಶಂಕರ ಭಟ್ ಏಮಾಜೆ ಗೋಕುಲ ಮನೆ ಮಿತ್ತೂರು
ನನಗೆ 10 ವರ್ಷಗಳಿಂದ ಡಯಾಬಿಟಿಸ್ ಇದ್ದು ಅದರಜೊತೆಗೆ ಕಾಲಿಗೆ ಗಾಯವಾಗಿ ಡಯಾಬಿಟಿಸ್ ಇಂದ infection ಆಗಿದೆ. ಈ infection ಇಡೀ ದೇಹಕ್ಕೆ ಸೇರಿಕೊಂಡಿದ್ದು ಕಿಡ್ನಿ, ಲಿವರ್,ಹೃದಯ ಕ್ಕೆ ಸಮಸ್ಯೆಯಾಗಿದೆ. ಸದ್ಯಕ್ಕೆ ಕಣಚೂರು ಆಸ್ಪತ್ರೆ ದೇರಳಕಟ್ಟೆಯಲ್ಲಿ ICU ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಲಿನ ನಾಲ್ಕು ಬೆರಳುಗಳನ್ನು ತುಂಡು (Amputation). ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸರಿ ಸುಮಾರು 2 ರಿಂದ 3 ಲಕ್ಷದ ವರೆಗೆ ಖರ್ಚಾಗಬಹುದು ಎಂದು ಹೇಳಿದರು.

ನನ್ನ ತಂದೆ ವೆಂಕಟರಮಣ ಭಟ್ 8 ದಿನಗಳ ಹಿಂದೆ ತೀರಿಹೋಗಿದ್ದು ಮನೆಯಲ್ಲಿ ನಾನು ಮತ್ತು ನನ್ನ ತಾಯಿ (ಸಾವಿತ್ರಿ 80 ವರ್ಷ) ಮಾತ್ರ ಇರುವುದು.
ನಾನೊಬ್ಬನೇ ಇಡೀ ಮನೆಗೆ ಜವಾಬ್ದಾರಿ.
ಹಾಗಾದ ಕಾರಣ ನನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ,ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಅಶಕ್ತನಾಗಿರುವುದರಿಂದ ದಯವಿಟ್ಟು ಹಣಕಾಸಿನ ಸಹಾಯ ಮಾಡಬೇಕು ಎಂದು ನಿಮ್ಮೆಲ್ಲರಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.
ನಿಮ್ಮ ಈ ಸಹಾಯಕ್ಕೆ ಯಾವಾಗಲೂ ಕೃತಜ್ಞರಾಗಿರುತ್ತೇನೆ.

ಇಂತಿ ನಿಮ್ಮ
ಸತ್ಯ ಶಂಕರ ಭಟ್

About The Author

Leave a Reply