

ಚಿಕ್ಕಮಗಳೂರು -: ಜೀವ ಬಿಟ್ಟೇವು ಗೋಮಾಳ ಬಿಡುವುದಿಲ್ಲ ಯಾಳಗೊಂಡನ ಹಳ್ಳಿಯ ರೈತರ ಹೋರಾಟ….. ಜಿಲ್ಲೆಯ ಕಡೂರು ತಾಲೂಕಿನ ಯಾಳಗೊಂಡನ ಹಳ್ಳಿ ಗ್ರಾಮದಲ್ಲಿ ಸುಮಾರು 96 ಎಕರೆ ಗೋವುಗಳಿಗಾಗಿ ಮೀಸಲಿದ್ದ ಗೋವು ಗೋಮಾಳದಲ್ಲಿ ಸುಮಾರು 20 ಎಕರೆ ಭದ್ರ ನೀರಿನ ಚಾನೆಲ್ಗೆ ಹೋಗಿದೆ ಉಳಿದಿರುವ 76 ಎಕರೆಯಲ್ಲಿ ಯಾಳಗೊಂಡನ ಹಳ್ಳಿಯ ರೈತರ ಜಾನುವಾರುಗಳು ಬದುಕಿವೆ ಈ ಗೋಮಾಳವು ಹೋದರೆ ರೈತರು ದನ ಕರುಗಳನ್ನ ಎಲ್ಲಿ ಮೇಹಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು, ಅಲ್ಲದೆ ಕಡೂರು ತಹಸೀಲ್ದಾರ್ ಪೂರ್ಣಿಮಾ ಅವರು ಸ್ಥಳದಲ್ಲಿ ಮಾತನಾಡಿ ರೈತರ ಮನ ಬದ್ಧಲಾಯಿಸಲು ಪ್ರಯತ್ನ ಮಾಡಿದರು, ಆದರೆ ಅವರ ಯಾವದೇ ಮನಹೊಲಿಕೆಗೆ ಗ್ರಾಮದ ರೈತರು ಅವರ ಗುರಿ ಜೀವ ಬೆಟ್ಟೇವು ಗೋಮಾಳ ಬಿಡುವುದಿಲ್ಲ ( ಗೋಮಾಳ ಬೇಕು ) ಇದನ್ನು ನಾವು ಬಿಡುವುದಿಲ್ಲ ಎಂಬ ಕೂಗು ಕೇಳಿ ಬಂದಿತು.






