May 4, 2026
WhatsApp Image 2026-05-04 at 8.25.19 AM

ಕಾರ್ಕಳ:  ಆಸ್ತಿ ವಿಚಾರದಲ್ಲಿ ತಮ್ಮನೇ ತನ್ನ ಅಣ್ಣನ ಕೊಲೆ ಮಾಡಿರುವ ಘಟನೆ ಕಾರ್ಕಳ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತರನ್ನು ರಿಚರ್ಡ್ ಡಿ’ಸೋಜಾ ಎಂದು ಗುರುತಿಸಲಾಗಿದೆ. ಅವರ ಪತ್ನಿ ಜೆಸಿಂತಾ ಡಿ’ಸೋಜಾ ನೀಡಿದ ದೂರಿನ ಪ್ರಕಾರ, ಮೇ 2 ರಂದು ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ರಿಚರ್ಡ್ ಮತ್ತು ಅವರ ಸಹೋದರ ಹೆರಾಲ್ಡ್ ಡಿ’ಸೋಜಾ ಅವರ ನಿವಾಸ ಮತ್ತು ಆಸ್ತಿಯ ಬಗ್ಗೆ ನಿರಂತರ ನಿರಂತರ  ಇಬ್ಬರ ನಡುವೆ ತಕರಾರು ಇತ್ತು. . ಮಿತ್ತಬೆಟ್ಟುವಿನಲ್ಲಿ ಅವರ ಆಸ್ತಿಯಲ್ಲಿ ನಡೆದ ವಾಗ್ವಾದದ ಸಂದರ್ಭದಲ್ಲಿ ಜಗಳ  ನಡೆದಿತ್ತು.  ಆ  ವೇಳೆ   ಹೆರಾಲ್ಡ್ ಡಿ’ಸೋಜಾ ಅವರು ಮರದ ರೀಪ್‌ನಿಂದ ರಿಚರ್ಡ್ ಮೇಲೆ ಹಲ್ಲೆ ನಡೆಸಿ ಕೊಲೆ  ಮಾಡಲಾಗಿದೆ ಎಂದು  ಆರೋಪಿಸಲಾಗಿದೆ. ಮೇ 3 ರಂದು ದಾಖಲಾಗಿದ್ದ ದೂರಿನ ಆಧಾರದ ಮೇಲೆ ಕಾರ್ಕಳ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿವೈಎಸ್‌ಪಿ ವಿಜಯಪ್ರಸಾದ್‌ ಕೆಎಸ್‌ಪಿಎಸ್‌ ಅವರ ಮಾರ್ಗದರ್ಶನದಲ್ಲಿ ಸಿಪಿಐ ಅಜಮತ್‌ ಅಲಿ (ಕಾರ್ಕಳ ನಗರ ಠಾಣೆ ಪ್ರಭಾರಿ ಪಿಐ) ನೇತೃತ್ವದಲ್ಲಿ ಪಿಎಸ್‌ಐ ಪ್ರಸನ್ನ ಎಂ.ಎಸ್‌., ಪಿಎಸ್‌ಐ ಮುರಳೀಧರ ನಾಯ್ಕ್‌, ಪಿಎಸ್‌ಐ ಶಿವಕುಮಾರ್‌, ಎಎಸ್‌ಐ ಶೇಖರ್‌ ನಾಯ್ಕ್‌, ಎಎಸ್‌ಐ ಮೂರ್ತಿ, ರಂಜಿತ್‌, ಶ್ರೀನಿವಾಸ್‌, ಮಹಾಂತೇಶ್‌, ಗೋಪಾಲಕೃಷ್ಟ, ಗಜಾನಾಯ್ಕ್‌ ಶಶಿ, ಸಂತೋಷ್‌ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಆರೋಪಿಯನ್ನು ಪ್ರಸ್ತುತ ಬಂಧನದಲ್ಲಿ ಡಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

About The Author

Leave a Reply