May 4, 2026
WhatsApp Image 2026-05-04 at 11.30.55 AM

ಚೆನ್ನೈ: ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ನೂರರ ಗಡಿ ದಾಟುವ ಮೂಲಕ ಮುನ್ನಡೆ ಸಾಧಿಸಿದೆ.

ಇಂದು ಬೆಳಗ್ಗೆ 10.40 ಗಂಟೆ ಸುಮಾರಿಗೆ ಟಿವಿಕೆ 104, ಆಡಳಿತ ಡಿಎಂಕೆ 51 ಎಐಎಡಿಎಂಕೆ ಮೈತ್ರಿಕೂಟ 78 ಸ್ಥಾನಗಳು ಹಾಗೂ ಇತರೇ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಆಡಳಿತ ಪಕ್ಷವಾದ ಡಿಎಂಕೆಗೆ ಭಾರೀ ಹಿನ್ನಡೆ ಉಂಟಾಗಿದೆ. ಉದಯನಿಧಿ ಸ್ಟಾಲಿನ್ ಪ್ರತಿನಿಧಿಸಿರುವ ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರ ಹಾಗೂ ಎಂ.ಕೆ ಸ್ಟಾಲಿನ್ ಪ್ರತಿನಿಧಿಸಿರುವ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಮುನ್ನಡೆ ಸಾಧಿಸಿದೆ.

About The Author

Leave a Reply