May 13, 2026
WhatsApp Image 2026-05-13 at 10.00.24 AM

ಮಂಗಳೂರಲ್ಲಿ ಸೋಶಿಯಲ್ ಮೀಡಿಯಾ “ಪ್ರಾಂಕ್” ಮತ್ತು ಗಿಫ್ಟ್” ಹೆಸರಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ವಿಡಿಯೋ ಟ್ರೆಂಡ್ ಈಗ ಹೊಸ ತಿರುವು ಪಡೆದಿದೆ. ಸಮಾಜ ಮತ್ತು ಸಮುದಾಯದ ಪರವಾಗಿ ಧ್ವನಿ ಎತ್ತಿದ್ದ ರಿಯಾಝ್ ಹರೆಕಳ ಅವರ ಬರಹದ ಬೆನ್ನಲ್ಲೇ, ಅಪಾಯಕಾರಿ ವಿಡಿಯೋ ಮಾಡುತ್ತಿದ್ದ ಇನ್‌ಸ್ಟಾಗ್ರಾಮ್ ಯುವಕರ ಗುಂಪು ಇಂದು ಸಾರ್ವಜನಿಕವಾಗಿ ಕ್ಷಮೆ ಕೇಳಿದೆ.

ಏನಾಗಿತ್ತು?
ಕಳೆದ ಕೆಲವು ದಿನಗಳಲ್ಲಿ ಮಂಗಳೂರಿನ ರೈಲ್ವೆ ಸ್ಟೇಷನ್, ಮಾಲ್, ಕಾಲೇಜು ರಸ್ತೆಗಳಲ್ಲಿ ಫಾಲೋ ಮಾಡಿದ್ರೆ ಗಿಫ್ಟ್” ಅಂತ ಹೇಳಿ ಯುವತಿಯರನ್ನು ಅಡ್ಡಗಟ್ಟಿ, ಅನುಮತಿ ಇಲ್ಲದೆ ವಿಡಿಯೋ ತೆಗೆಯುವ ಘಟನೆಗಳು ಹೆಚ್ಚಾಗಿದ್ದವು. Views ಮತ್ತು Followersಗಾಗಿ ಕೆಲ ಯೂಟ್ಯೂಬರ್‌ಗಳು ಹೆಣ್ಣುಮಕ್ಕಳ ಮುಜುಗರದ ಕ್ಷಣಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಈ ಟ್ರೆಂಡ್ ಕಾಸರಗೋಡು, ಉಪ್ಪಳ ಭಾಗಕ್ಕೂ ಹರಡಿದೆ ಅಂತ ಸ್ಥಳೀಯರು ದೂರಿದ್ದರು.

ರಿಯಾಝ್ ಹರೆಕಳ ಎಚ್ಚರಿಕೆ
ಈ ವಿಚಾರವಾಗಿ ರಿಯಾಝ್ ಹರೆಕಳ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಧ್ವನಿ ಎತ್ತಿ ಬರೆದಿದ್ದರು. ಅವರ ಸಂದೇಶ ಸ್ಪಷ್ಟವಾಗಿತ್ತು: ಮುಸ್ಲಿಂ ಹಾಗೂ ಇನ್ನಿತರ ಯುವತಿಯರನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದರೆ ಸುಮ್ಮನೆ ಇರುವುದಿಲ್ಲ. ಇದು ಕೇರಳದವರಿಗೆ ಮಾತ್ರ ಸೀಮಿತವಲ್ಲ, ಕರ್ನಾಟಕದವರಿಗೂ ಅನ್ವಯ. ರಿಯಾಝ್ ಮತ್ತೊಮ್ಮೆ ಎಚ್ಚರಿಕೆಯ ಕರೆಗಂಟೆ ಕೊಟ್ಟಿದ್ದಾರೆ.

ಕ್ಷಮೆ ಕೇಳಿದ ಯುವಕರು
ರಿಯಾಝ್ ಅವರ ಬರಹದ ನಂತರ, ವಿವಾದಿತ ವಿಡಿಯೋ ಮಾಡುತ್ತಿದ್ದ ಇನ್‌ಸ್ಟಾಗ್ರಾಮ್ ಯುವಕರು ಇಂದು ಕ್ಷಮೆ ಯಾಚಿಸಿದ್ದಾರೆ. ಇನ್ಮುಂದೆ ಇಂಥ ವಿಡಿಯೋ ಮಾಡಲ್ಲ, ಯಾರಿಗೂ ಮುಜುಗರ ತರಲ್ಲ ಅಂತ ಅವರು ಹೇಳಿಕೊಂಡಿದ್ದಾರೆ.

ಇದರಿಂದ ಕಲಿಯಬೇಕಾದ್ದು
ಮಂಗಳೂರು ಪೊಲೀಸರು ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರು – ಗಿಫ್ಟ್-ಫಾಲೋ” ಟ್ರ್ಯಾಪ್‌ನಿಂದ ಮುಂದೆ ಸ್ನೇಹ, ಬ್ಲ್ಯಾಕ್‌ಮೇಲ್‌ಗೆ ದಾರಿ ಆಗಬಹುದು. 2025ರಲ್ಲಿ ಮುಲ್ಕಿ ಮತ್ತು ಗುರುಪುರದಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿದ್ದವು.

ಈ ಬೆಳವಣಿಗೆ ತೋರಿಸೋದು ಒಂದೇ: ಸೋಶಿಯಲ್ ಮೀಡಿಯಾ “ವೈರಲ್” ಆಗುವ ಹುಚ್ಚಿಗೆ ಬೀಳೋ ಮುನ್ನ, ಇನ್ನೊಬ್ಬರ ಗೌರವ, ಅನುಮತಿ, ಮತ್ತು ಸುರಕ್ಷತೆ ನೆನಪಿರಲಿ. ಸಮುದಾಯದ ಧ್ವನಿಗೆ ಬೆಲೆ ಕೊಟ್ಟಾಗಲೇ ಇಂಥ ಟ್ರೆಂಡ್‌ಗಳಿಗೆ ಬ್ರೇಕ್ ಬೀಳುತ್ತೆ-ಹರೇಕಳ

About The Author

Leave a Reply