May 19, 2026
image - 2026-05-19T090600.560

ಬಂಟ್ವಾಳ:ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ 2 ಪ್ರತ್ಯೇಕ ಪ್ರಕರಣದಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000 ದಂಡವನ್ನು ವಿಧಿಸಿ ನ್ಯಾಯಾಲಯವು ಆದೇಶಿಸಿದೆ.

ಏಪ್ರಿಲ್‌ 06 2026 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ನಲ್ಲಿ KA-19-HT-9694 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏಪ್ರಿಲ್‌ 28. 2026 ರಂದು ಬಿಸಿ ರೋಡ್‌ ನಲ್ಲಿ ಬಳಿ, KA05KG6785 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ ಪತ್ತೆಹಚ್ಚಿದರು.ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ವಾಹನಗಳ ಮಾಲಿಕರ ವಿರುದ್ದ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಕಲಂ:199(A) IMV ಅಡಿಯಲ್ಲಿ ಮಾನ್ಯ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಣ ಪತ್ರ ಸಲ್ಲಿಸಿದ್ದರು.ಮೇ 18, .2026 ರಂದು ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ವಾಹನದ ಮಾಲೀಕರಿಗೆ ತಲಾ ರೂ.25,000 ದಂಡ ವಿಧಿಸಿ ಅದೇಶಿಸಿದೆ.

About The Author

Leave a Reply