May 28, 2026
WhatsApp Image 2026-05-28 at 3.55.54 PM

ಶ್ರೀ ಈಶ್ವರ್ ಭಟ್ ರಾಕೋಡಿ ಬೋಳಂತ್ತೂರು ಇವರು ಸುಮಾರು 50 ವರ್ಷಗಳಿಂದ ಬಿಜೆಪಿ ಯ ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದು ಬೋಳಂತ್ತೂರುನಲ್ಲಿ ಧಾರ್ಮಿಕ ರಾಜಕೀಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪ್ರಮುಖರಾಗಿದ್ದುಕೊಂಡು ನೇರ ನಡೆಯ ನುಡಿಯ ಪ್ರಾಮಾಣಿಕ ಬಡವರ ಬಗ್ಗೆ ಕಾಳಜಿವಿರುವ ಒಬ್ಬ ಬಿಜೆಪಿ ಯ ಕಾರ್ಯಕರ್ತರಾಗಿರುತ್ತಾರೆ ಹಾಗೂ ಬೋಳಂತ್ತೂರಿನ ಹಲವು ಸಂಘ ಸಂಸ್ಥೆಗಳಲ್ಲಿ ಪ್ರಮುಖರಾಗಿದ್ದುಕೊಂಡು ತನ್ನ ಮುಂದಾಳತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುತ್ತಾರೆ,

ಶ್ರೀಯುತರು ಬಿಜೆಪಿ ಯ ಸಕ್ರಿಯ ಕಾರ್ಯಕರ್ತನಾಗಿದ್ದು ಬಿಜೆಪಿ ಯಲ್ಲಿ ಒಬ್ಬ ಕಾರ್ಯಕರ್ತನಿಗೆ ಯಾವುದೇ ಬೆಲೆವಿರುದಿಲ್ಲ ಅವರ ಮಾತಿಗೆ ಯಾವುದೇ ಸ್ಪಂದನೆ ವಿಲ್ಲದಿರುವುದರಿಂದ ಇವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷದ ಕಾರ್ಯನಿಷ್ಠೆಯನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವರಾದ ಬಿ ರಮಾನಾಥ ರೈ ಯವರ ನಿವಾಸದಲ್ಲಿ ಪಕ್ಷದ ಶಾಲು ಧರಿಸಿ ಸೇರ್ಪಡೆಯಾದರು.

About The Author

Leave a Reply