May 31, 2026
vandebharat_300526_1

ಮಂಗಳೂರು: ಕರಾವಳಿ ಜನತೆಯ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಕೊನೆಗೂ ಆರಂಭವಾಗುತ್ತಿದ್ದು, ಜೂನ್ 1 ರಿಂದ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಪ್ರಸ್ತುತ ಶಿರಾಡಿ ಘಾಟ್ ರಸ್ತೆಯ ಮೂಲಕ ರಾಜ್ಯ ರಾಜಧಾನಿ ಮತ್ತು ಮಂಗಳೂರಿಗೆ ಪ್ರಯಾಣಿಸಲು ಬೇಕಾಗುವ 8 ರಿಂದ 10 ಗಂಟೆಗಳ ಸಮಯವನ್ನು, ಈ ವಂದೇ ಭಾರತ್ ರೈಲಿನಿಂದ ಕೇವಲ 5 ಗಂಟೆಗಳಿಗೆ ಇಳಿಕೆಯಾಗಲಿದೆ.ಸ್ಪೀಡ್ ಪ್ರಾಯೋಗಿಕ ಕಾರ್ಯಾಚರಣೆಯನ್ನು ನಡೆಸಲಿದೆ. ಸುಮಾರು ಒಂದು ವಾರದ ಅವಧಿಯಲ್ಲಿ ಲೋಡ್ ಟ್ರಯಲ್ಸ್ ಮತ್ತು ತಾಂತ್ರಿಕ ಮೌಲ್ಯಮಾಪನಗಳು ನಡೆಯಲಿದ್ದು, ಆ ಬಳಿಕ ವಾಣಿಜ್ಯ ಕಾರ್ಯಾಚರಣೆಗೆ ಅಂತಿಮ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮೇ 23 ರಂದು ಮಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ‘ನಾವು ಜೂನ್‌ನಲ್ಲಿ ವಂದೇ ಭಾರತ್ ರೈಲು ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು. ಇದೀಗ ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಅವರೂ ಸಹ ಸಿದ್ಧತಾ ಕಾರ್ಯಗಳು ಮತ್ತು ತಾಂತ್ರಿಕ ಪರಿಶೀಲನೆಗಳು ಅಂತಿಮ ಹಂತದಲ್ಲಿವೆ ಎಂದು ಖಚಿತಪಡಿಸಿದ್ದಾರೆ.ಕಠಿಣವಾದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್ಈ ಮಾರ್ಗದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ವರೆಗಿನ ಘಾಟ್ ಸೆಕ್ಷನ್ ಅತ್ಯಂತ ಕಠಿಣವಾಗಿದೆ. ಈ 55 ಕಿಲೋಮೀಟರ್ ಉದ್ದದ ಕಾರಿಡಾರ್‌ನಲ್ಲಿ 57 ಸುರಂಗಗಳು, 258 ಸೇತುವೆಗಳು ಮತ್ತು 108 ಕಡಿದಾದ ತಿರುವುಗಳಿವೆ. ಈಗಾಗಲೇ ರೈಲ್ವೆ ಇಲಾಖೆಯು ಸುಮಾರು 93.55 ಕೋಟಿ ರೂ. ವೆಚ್ಚದಲ್ಲಿ ಈ ಘಾಟ್ ಸೆಕ್ಷನ್‌ನಲ್ಲಿ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಖಾಲಿ ಎಲೆಕ್ಟ್ರಿಕ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟಾರೆಯಾಗಿ ಸುಮಾರು 400 ಕಿಲೋಮೀಟರ್ ವ್ಯಾಪಿಸಿರುವ ಮೈಸೂರು-ಹಾಸನ-ಮಂಗಳೂರು ವಿದ್ಯುದೀಕರಣದ ಯೋಜನೆಗೆ ಅಂದಾಜು 461.23 ಕೋಟಿ ರೂ. ನಿಂದ 729.28 ಕೋಟಿ ರೂ. ಗೆ ಏರಿಕೆಯಾಗಿದೆ. ಈ ಮಾರ್ಗದಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ರೈಲು ಸಂಚರಿಸುವಂತೆ ಆಧುನಿಕ ಓವರ್‌ಹೆಡ್ ವಿದ್ಯುದೀಕರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಪ್ರವಾಸೋದ್ಯಮಕ್ಕೆ ಭಾರಿ ಬೂಸ್ಟ್ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ಆರಂಭವಾದರೆ, ಬೆಂಗಳೂರು ಮತ್ತು ಕರಾವಳಿ ನಡುವಿನ ಪ್ರಯಾಣದ ಚಿತ್ರಣವೇ ಬದಲಾಗಲಿದೆ. ಶಿರಾಡಿ ಘಾಟ್ ಮೂಲಕ ಸಂಚರಿಸುವ ದೀರ್ಘಾವಧಿಯ ರಸ್ತೆ ಪ್ರಯಾಣದ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ಉಡುಪಿ, ಕಾರವಾರ ಮತ್ತು ಮಂಗಳೂರು ಭಾಗಗಳಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ಸಿಗಲಿದೆ.ಕಾರ್ಯಾಚರಣೆಯ ಸಾಧ್ಯತೆಗಳನ್ನು ಆಧರಿಸಿ, ಈ ರೈಲು ಸೇವೆಯನ್ನು ಗೋವಾದ ಮಡಗಾಂವ್‌ವರೆಗೆ ವಿಸ್ತರಿಸುವ ಆಲೋಚನೆಯೂ ಇದೆ ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ. ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ, ಇದು ಕರ್ನಾಟಕದ ರೈಲ್ವೆ ಸೇವೆಯಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಲಿದೆ

About The Author

Leave a Reply