July 21, 2026
WhatsApp Image 2026-07-21 at 10.28.10 AM

ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾ ಯಜ್ಞಯು ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜೀ ಮಹಾರಾಜ್ ಇವರ ಆಶೀರ್ವಾದದೊಂದಿಗೆ ದಿನಾಂಕ ಆಗಷ್ಟ್ 24 ರಿಂದ 28 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ನಡೆಯಲಿದೆ.

ಲಕ್ಷ್ಮೀನಾರಾಯಣ ಯಾಗ:
ಲಕ್ಷ್ಮೀ = ಸಂಪತ್ತಿನ ದೇವತೆ. ನಾರಾಯಣ = ಸಮೃದ್ಧಿಯ ದೇವರು. ಪ್ರತಿ ಮನೆಯಲ್ಲಿ ಧನ ಸಂಪತ್ತು ವೃದ್ಧಿಸಿದರೆ ಜನರು ಸಂತೃಪ್ತಿ ಸಮಾಧಾನ ನೆಮ್ಮದಿಯಿಂದ ಬದುಕಬಲ್ಲರು. ಕುಟುಂಬಗಳು ಸಮೃದ್ಧಿಗೊಂಡರೆ ಆ ಪರಿಸರ ಶಾಂತಿಯಿಂದ ಕೂಡಿರುತ್ತದೆ. ಪರಿಸರ ಶಾಂತಿಯಾದಲ್ಲಿ ನಾಡು ಅಭಿವೃದ್ಧಿಯಾಗುತ್ತದೆ. ನಾಡು ಅಭಿವೃದ್ಧಿಯಾದಲ್ಲಿ ಸಮೃದ್ಧ ಭಾರತ ನಿರ್ಮಾಣ ಸಾಧ್ಯ.
ಈ ಉದ್ದೇಶದಿಂದ ಬ್ರಹ್ಮಲೀನ ಶ್ರೀ ಜಗದಾಚಾರ್ಯ ಡಾ. ಸ್ವಾಮೀ ಅಖಿಲೇಶ್‌ಜೀ ಮಹಾರಾಜ್ (ಕೌಲ್‌ಕುಲ್) ಇವರ ಶಿಷ್ಯ ಪೂಜ್ಯ ಶ್ರೀ ಸ್ವಾಮಿ ಕಪಿಲ್ ಜೀ ಮಹಾರಾಜ್ (ಕೌಲ್ ಕುಲ್) ಇವರ ಮಾರ್ಗದರ್ಶನದಲ್ಲಿ ಸಾತ್ವಿಕ ಬಂಧುಗಳು ಒಂದುಗೂಡಿ ಲೋಕ ಕಲ್ಯಾಣಾರ್ಥವಾಗಿ ನೆರವೇರಿಸಲಿರುವ ಶ್ರೀ ಲಕ್ಷ್ಮೀನಾರಾಯಣ ಯಜ್ಞದ ಈ ಪುಣ್ಯಕಾರ್ಯದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಭಾಗವಹಿಸಬೇಕಾಗಿ ಅಧ್ಯಕ್ಷರು ಮತ್ತು ಸದಸ್ಯರು
ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಜ್ಞ ಸಮಿತಿ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 8123598408, 8105067462, 9844483836

About The Author

Leave a Reply