

ವಿಶ್ವ ತುಳುವೆರ್ (ರಿ) ಪ್ರಚಾರ ನಿರ್ವಹಕ ಅಧ್ಯಕ್ಷರಾಗಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. ಇವರು ತುಳು ಹಾಗೂ ಕನ್ನಡ ಕಿರುತೆರೆ ನಟನಾಗಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೆ ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರಾಗಿ ತುಳು ಭಾಷೆ ತುಳುನಾಡಿಗೆ ದುಡಿದ ಹೆಮ್ಮೆಯೂ ಕೂಡ ಇದೆ, ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ಇವರದ್ದು ಸಮಾಜ ಸೇವಕರು ಕೂಡ ಆಗಿದ್ದಾರೆ. ತುಳುನಾಡು ಹಾಗೂ ತುಳುನಾಡಿನ ಜನತೆಯ ಏಳಿಗೆಗಾಗಿ ಇನ್ನಷ್ಟು ದುಡಿಯುವಂತಾಗಲಿ. ಇವರ ಕೀರ್ತಿ ಇನ್ನಷ್ಟು ವಿಶ್ವ ಮಟ್ಟಕ್ಕೆ ಎರಲಿ ಎಂದು ಇವರಿಗೆ ಹೃದಯಪೂರ್ವಕ ಹಾರೈಕೆಗಳು ಮತ್ತು ಅಭಿನಂದನೆಗಳು.


ವಿಶ್ವ ತುಳುವೆರ್ ರಿ) ಇದರ ಕೇರಳ ಘಟಕ ಅಧ್ಯಕ್ಷರಾಗಿ ಡಾ ವಾಣಿಶ್ರೀ ಕಾಸರಗೂಡು, ಇವರು ಆಯ್ಕೆ ಯಾಗಿದ್ದಾರೆ.
ಪಾರ್ಪಜೆ ಈಶ್ವರ ಭಟ್ ಮತ್ತು ದೇವಕಿ ದಂಪತಿಗಳ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಿಕ್ಷಣವನ್ನು ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಪಿಯುಸಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಆಯುರ್ವೇದ ವೈದ್ಯ ಶಿಕ್ಷಣ ಪದವಿಯನ್ನು ಕೆವಿಜಿ ಆಯುರ್ವೇದ ಕಾಲೇಜು ಸುಳ್ಯ ಇಲ್ಲಿ ಪೂರೈಸಿರುತ್ತಾರೆ ಬಾಲ್ಯದಲ್ಲಿ ಕ್ರೀಡಾ ಧ್ರುವತಾರೆಯಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿರುತ್ತಾರೆ ಜೀವನಕ್ಕಾಗಿ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಇವರು ವಿವಾಹವಾದ ನಂತರ ತನ್ನ ಪತಿಯಾದ ಡಾ. ವೆಂಕಟಗಿರೀಶ್ ಅವರೊಂದಿಗೆ ಕಾಸರಗೋಡಿನ ಚೂರಿಪಳ್ಳ ಇಲ್ಲಿನ ನೆಲ್ಲಿಕಟ್ಟೆ ಎಂಬ ಊರಿನಲ್ಲಿ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯವನ್ನು ತೆರೆದು ಜನರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ
ತಮ್ಮ ಮಾವನವರಾದ ಪೊಟ್ಟಿಪಳ್ಳ ಪ್ರಖ್ಯಾತ ಆಶು ಕವಿ ಕೀರ್ತಿ ಶೇಷ ನಾರಾಯಣ ಭಟ್ಟರ ಪ್ರೇರಣೆಯಿಂದಾಗಿ ತಮ್ಮನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಎಂಬ ಸಾಹಿತ್ಯ ಕಲಾ ಸಂಸ್ಥೆಯನ್ನು ಹುಟ್ಟು ಹಾಕಿ ಗಡಿನಾಡಿನಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ನಡೆಸಿಕೊಂಡು ಬಂದಿರುತ್ತಾರೆ ಈಗಾಗಲೇ ತಮ್ಮ ಸಂಸ್ಥೆಯಿಂದ 224 ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅದೆಷ್ಟೋ ಕಲಾವಿದರಿಗೆ ರಂಗವೇದಿಕೆಯನ್ನು ಕಲ್ಪಿಸಿ ಕೊಟ್ಟಿರುತ್ತಾರೆ ಇವರು ಕೂಡ ಸ್ವತಃ ಕಲಾವಿದರಾಗಿದ್ದು ಅನೇಕ ವೇದಿಕೆಗಳಲ್ಲಿ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಈಗಾಗಲೇ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ ಇವರ ಸಾಹಿತ್ಯ ಕ್ಷೇತ್ರದ ಕಲಾ ಸಾಧನೆಗಾಗಿ ಕಲಾ ಸಂಸ್ಕೃತಿ ಸಾರಥಿ ಪ್ರಶಸ್ತಿ
ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಗಜ ರತ್ನ ಪ್ರಶಸ್ತಿ, ಗಡಿನಾಡ ಸಾಧಕಿ ಗೌರವ ಸನ್ಮಾನ, ಕರುನಾಡ ವಿಭೂಷಣ ಗೌರವ ಪ್ರಶಸ್ತಿ,ಕೆಂಪಮ್ಮ ಪುರಸ್ಕಾರ
ಈ ಹತ್ತು ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅರಸಿ ಬಂದಿರುತ್ತವೆ
ಪ್ರಕೃತಿ ಎಂಬ ಸಾಹಿತ್ಯ ಕೃತಿಯನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಕೀರ್ತಿ ಇವರದು , ನಿಮ್ಮ ಅವದಿ ಯಲ್ಲಿ ಕೇರಳದ ತುಳು ನಾಡಿಗರಲ್ಲಿ ತುಳು ಸಂಸ್ಕೃತಿ ತುಳು ಕಂಪು ಇನ್ನು ಬೆಳೆದು ಉಲಿಯುವಂತಾಗಲಿ ಅದ್ಯಕ್ಷರಾಗಿ ಅಯ್ಕೆಯಾದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
ವಿಶ್ವ ತುಳುವೆರ್( ರಿ) ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪ್ರಕಾಶ್ ಸಿಂಫೋನಿ ಯಾವರೀಗೆ ಹೃತ್ಪೂರ್ವಕ ಅಭಿನಂದನೆಗಳು, ಶ್ರೀಯುತರು ಹಲವಾರು ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುದಲ್ಲದೇ, ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ, ಮತ್ತು ಕರಾವಳಿ ಕರ್ನಾಟಕ ನೃತ್ಯ ಕಲಾವಿದರ ಸಂಘ , ಇದರ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿರುವವರು, ಶ್ರೀಯುತರ ಅವದಿಯಲ್ಲಿ ತುಳುನಾಡು, ತುಳುನಾಡ ಜನತೆ ಇನ್ನಷ್ಟು ಅಭಿವೃದ್ಧಿ ಕಾಣುವಂತಾಗಲಿ ಯೆಂದು ಹಾರೈಕೆ






