

ದುಬೈ: ಪವಿತ್ರ ನಗರವಾದ ಮೆಕ್ಕಾದಲ್ಲಿರುವ ಮಸೀದಿಯೊಳಗೆ ಅಸಭ್ಯ ಕೃತ್ಯ ಎಸಗಿದ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸೌದಿ ಅರೇಬಿಯಾ ಮರಣದಂಡನೆ ಜಾರಿಗೊಳಿಸಿದೆ.ನ್ಯಾಯಾಂಗದ ಅಂತಿಮ ಅನುಮೋದನೆಗಳು ದೊರೆತ ಬಳಿಕ ಮತ್ತು ರಾಜಾಜ್ಞೆ ಹೊರಡಿಸಿದ ನಂತರ ಮೆಕ್ಕಾ ಪ್ರದೇಶದಲ್ಲಿ ಮರಣದಂಡನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ದೃಢಪಡಿಸಿದೆ.
ನಂತರ ಪ್ರಕರಣವನ್ನು ಸಂಬಂಧಿತ ಕ್ರಿಮಿನಲ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರನ್ನೂ ದೋಷಿಗಳೆಂದು ಘೋಷಿಸಿ, ಇಸ್ಲಾಮಿಕ್ ಕಾನೂನಿನಡಿ ಮರಣದಂಡನೆ ವಿಧಿಸಿದರು.ಇಸ್ಲಾಮಿಕ್ ಕಾನೂನಿನಲ್ಲಿ, ಕುರಾನ್‌ನಲ್ಲಿ ನಿರ್ದಿಷ್ಟ ಶಿಕ್ಷೆಯನ್ನು ಸ್ಪಷ್ಟವಾಗಿ ನಿಗದಿಪಡಿಸದ ಅಪರಾಧಗಳಿಗೆ ನ್ಯಾಯಾಂಗದ ವಿವೇಚನೆಯ ಆಧಾರದ ಮೇಲೆ ಶಿಕ್ಷೆ ವಿಧಿಸುವ ವ್ಯವಸ್ಥೆಯನ್ನು ತಅರ್ಝೀ ಎಂದು ಕರೆಯಲಾಗುತ್ತದೆ.
ತೀರ್ಪು ಪ್ರಕಟಿಸುವಾಗ, ಮಸೀದಿಯ ಪವಿತ್ರತೆಯನ್ನು ಉಲ್ಲಂಘಿಸಿರುವ ಗಂಭೀರತೆ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭಗಳನ್ನು ನ್ಯಾಯಾಲಯ ಒತ್ತಿಹೇಳಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.ಆರಂಭದಲ್ಲಿ ಮರಣದಂಡನೆ ವಿಧಿಸಿದ ಬಳಿಕ, ತೀರ್ಪನ್ನು ಹಲವು ಹಂತಗಳ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಯಿತು.

ನಂತರ ಮೇಲ್ಮನವಿ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಎರಡೂ ಶಿಕ್ಷೆಯನ್ನು ಎತ್ತಿಹಿಡಿದವು. ಇದರಿಂದ ಮರಣದಂಡನೆಯ ತೀರ್ಪು ಅಂತಿಮವಾಯಿತು.ಮೇಲ್ವಿಚಾರಣೆಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.ಧಾರ್ಮಿಕ ನಿಯಮಗಳ ಉಲ್ಲಂಘನೆಯ ವಿರುದ್ಧ ತನ್ನ ಕಠಿಣ ನಿಲುವನ್ನು ಪುನರುಚ್ಚರಿಸಿರುವ ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ, ದೇಶದ ಎಲ್ಲ ಧಾರ್ಮಿಕ
ಸ್ಥಳಗಳಲ್ಲಿ ಸಾರ್ವಜನಿಕ ನೈತಿಕತೆ ಮತ್ತು ದಂಡನಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಭದ್ರತಾ ಸಂಸ್ಥೆಗಳು ಮುಂದುವರಿಸಲಿವೆ ಎಂದು ತಿಳಿಸಿದೆ.






