

ಭಾರತವು ವಿಶ್ವದ ಅತ್ಯಂತ ಹಳೆಯ ನಾಗರೀಕೆಗಳಲ್ಲಿ ಒಂದು. ಪ್ರಾಚೀನ ಕಾಲದಲ್ಲಿ ಭಾರತವು ಉನ್ನತ ಕಲಿಕೆಗೆ ಕೇಂದ್ರಸ್ಠಾನವಾಗಿತ್ತು . ಇಲ್ಲಿನ ನಳಂದ, ತಕ್ಷಶಿಲಾ ಕೇಂದ್ರಗಳಲ್ಲಿ ಭಾರತೀಯ ಹಾಗೂ ವಿದೇಶೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಪ್ರಸ್ತುತ ಭಾರತದ ಶಿಕ್ಷಣ ನೀತಿಯು ಅಂತರಶಿಸ್ತೀಯ ಕಲಿಕೆ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಇಂದು “ಕೌಶಲ್ಯ ಶಿಕ್ಷಣ” ಉನ್ನತ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ವಿಮರ್ಶಾತ್ಮಕ ಚಿಂತನೆ, ಸೃಜನ ಶೀಲತೆ, ವ್ಯಕ್ತಿತ್ವ ಅಭಿವೃದ್ಧಿಗಾಗಿ ಡಿಜಿಟಲ್ ಸಾಕ್ಷರತೆ, ಕೃತಕ ಬುದ್ಧಿಮತ್ತೆ, ಸಂವಹನ ಕೌಶಲ್ಯಗಳು ಮುಂತಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಶಿಕ್ಷಣವು ವ್ಯಕ್ತಿಯ ದೇಹ , ಮನಸ್ಸು ಮತ್ತು ವ್ಯಕ್ತಿತ್ವವನ್ನು ರೂಪಿಸುವ ಮತ್ತು ಬಲಪಡಿಸುವ ಒಂದು ವ್ಯವಸ್ಥೆಯಾಗಿದೆ. ಭಾರತವು ಉನ್ನತ ಶಿಕ್ಷಣದಲ್ಲಿ ವಿವಿಧ ಸವಾಲುಗಳನ್ನು ಹೊಂದಿದೆ. ಈ ಸವಾಲುಗಳನ್ನು ಎದುರಿಸಲು ಮತ್ತು ಅದರ ಭವಿಷ್ಯದ ಬೆಳವಣಿಗೆಗೆ ಅದರ ತಲಾವಾರು GDP ಹೆಚ್ಚಿಸಲು ಉನ್ನತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷರು , ಗುಲ್ಬರ್ಗ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಎಸ್. ಆರ್. ನಿರಂಜನ್ ಅವರು ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ) ೧೩ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮುಖ್ಯ ಅಥಿತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಪೋಸ್ಟೊಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತದ ಪ್ರಾಂತೀಯ ಸುಪೀರಿಯರ್ ಸಿ. ಮರಿಯಾ ನವೀನ ಎ.ಸಿ. ಮಾತನಾಡಿ ಸಂತ ಆಗ್ನೇಸ್ ಕಾಲೇಜು ಶತಮಾನದಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದ ಸಂಸ್ಥೆಯಾಗಿದೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಿದೆ ಎಂದರು.

ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ೬೪೭ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಉನ್ನತ ರ್ಯಾಂಕ್ ಗಳಿಸಿದ ೨೨ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಪ್ರಾಶುಂಪಾಲೆ ಸಿ. ಡಾ. ಎಂ. ವೆನಿಸ್ಸಾ ಎ.ಸಿ. ಅವರು ನೂತನ ಪದವೀಧರರಿಗೆ ಪ್ರತಿಜ್ನಾ ವಿಧಿ ಬೋಧಿಸಿದರು. ಸಂತ ಆಗ್ನೇಸ್ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಸಿ. ಡಾ. ಎಂ. ಪ್ರೇಮ್ ಡಿಸೋಜಾ ಎ.ಸಿ., ಪಿ.ಜಿ. ಸಂಯೋಜಕಿ ಸಿ. ಡಾ. ಎಂ. ವಿನೋರಾ ಎ.ಸಿ., ಕಾಲೇಜಿನ ರಿಜಿಸ್ಟ್ರಾರ್ ಪ್ರೋ. ಶುಭರೇಖಾ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿ ಪ್ರೊ. ಸಂಗಪ್ಪ, ಶಿಕ್ಷಣ ತಜ್ಞ ಡಾ. ಸಂತೋಷ್ ರೆಬೆಲ್ಲೋ, ಆಡಳಿತ ಡೀನ್ ಶಾಂತಿ ನಜರೇತ್ ಹಾಗೂ ವಿವಿಧ ವಿಭಾಗಗಳ ಡೀನ್ ಗಳು, ಆಡಳಿತ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಡಾ. ದೇವಿಪ್ರಭಾ ಆಳ್ವ ಸ್ವಾಗತಿಸಿ, ಸ್ನಾತಕೋತ್ತರ ಆಡಳಿತ ನಿರ್ವಹಣಾ ವಿಭಾಗದ ಡಾ. ಮಲ್ಲಿಕಾ ಶೆಟ್ಟಿ ವಂದಿಸಿದರು. ರಸಾಯನ ಶಾಸ್ತ್ರ ವಿಭಾಗದ ಪ್ರೋ. ಹೆಲೆನ್ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.






