

ಬಂಟ್ವಾಳ: ಸರಪಾಡಿ ಹಾಗೂ ಮಣಿನಾಲ್ಕೂರು ವಲಯ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಎಸ್.ಐ.ಆರ್. ಜಾಗೃತಿ ಸಭೆ ಜೂನ್ 27ರಂದು ಸರಪಾಡಿ ಕುಕ್ಕುದಕಟ್ಟೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಅವರು ಮಾತನಾಡಿ, ಮತದಾರರ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಎಸ್.ಐ.ಆರ್. ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಿಗೆ ಮಾಹಿತಿ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಅಂಚನ್,ಲಾವಣ್ಯ ಬಲ್ಲಾಳ್ ನಿಗಮ ಅಧ್ಯಕ್ಷರು,
ಬಿ. ಆರ್ ಅಂಚನ್, ಬೇಬಿ ಕುಂದರ್, ಆದಂ ಕುಂಞಿ, ವಿಶ್ವನಾಥ್ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಪ್ರವೀಣ್ ರೊಡ್ರಿಗಸ್ ಬಂಟ್ವಾಳ, ದಯಾನಂದ ಶೆಟ್ಟಿ ಅಮೈ, ಶಿವಪ್ಪ ಪೂಜಾರಿ, ಕಾಂಚಲಾಕ್ಷಿ, , ವಿನ್ಸೆಂಟ್ ಪಿಂಟೋ, ಸಂಜೀವ ಪೂಜಾರಿ ಮತ್ತು ಬಿ.ಎಲ್.ಎ.ಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.






