

ಪುತ್ತೂರು: ಅತ್ತೆ ಹಾಗೂ ನಾದಿನಿಯಿಂದ ಕಿರುಕುಳಕ್ಕೆ ಬೇಸತ್ತು ಪುತ್ತೂರು ಪಂಜಳದ ಎರಡು ಪುಟ್ಟ ಮಕ್ಕಳ ತಾಯಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಿನಾಂಕ 06/07/2026 ರಂದು ನಿನ್ನೆ ಸುಮಾರು ಸಂಜೆ 6 ಗಂಟೆ ಸಮಯದಲ್ಲಿ ಪುತ್ತೂರಿನ ಪಂಜಳದಲ್ಲಿ ನಡೆದಿದೆ..
ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ತಕ್ಷಣ ಪುತ್ತೂರು ಮೆಡ್ ಲ್ಯಾಂಡ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಯುವತಿಯ ನಾದಿನಿ ಹಾಗೂ ಅತ್ತೆಯ ನಿರಂತರ ಕಿರುಕುಳಕ್ಕೆ ಬೇಸತ್ತು ಮಹಿಳೆ ವಿಷ ಸೇವಿಸಿದ್ದಾಗಿ ಯುವತಿಯ ಕುಟುಂಬಸ್ತರು ಆರೋಪಿಸಿದ್ದಾರೆ.
ಯುವತಿಯು ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಸ್ಥಿತಿಯಲ್ಲಿ ಇರುವುದಾಗಿ ವರದಿಯಾಗಿದೆ.. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..






