July 8, 2026
WhatsApp Image 2026-07-08 at 5.20.29 PM

ಏತಡ್ಕ, ಜು. 3: ಶ್ರೀ ಸದಾಶಿವ ದೇವಸ್ಥಾನ, ಏತಡ್ಕ 2026ರ ಜುಲೈ 11ರಂದು (ಶನಿವಾರ) ವಿಶೇಷ ಭಕ್ತಿ ಸೇವೆಯ ಅಂಗವಾಗಿ ಹಲಸಿನ ಅಪ್ಪ ಸೇವೆ ಹಾಗೂ ಬಲಿವಾಡು ಕೂಟ ಸೇವೆ ನಡೆಯಲಿದೆ.

ದೇವಸ್ಥಾನದ ಸಂಪ್ರದಾಯದಂತೆ ನಡೆಯುವ ಈ ಸೇವೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸದಾಶಿವ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಸೇವೆಗೆ ಹಲಸಿನ ಅಪ್ಪ ಸೇವೆಯ ದರ ₹120 ಹಾಗೂ ಬಲಿವಾಡು ಕೊಟ್ಟು ಸೇವೆಯ ದರ ₹100 ಎಂದು ನಿಗದಿಪಡಿಸಲಾಗಿದೆ. ಭಕ್ತರು ದೇವಸ್ಥಾನದಲ್ಲಿ ನೇರವಾಗಿ ಸೇವೆ ಬುಕ್ ಮಾಡಬಹುದಾಗಿದ್ದು, BHIM UPI, PhonePe, Google Pay ಹಾಗೂ Paytm ಸೇರಿದಂತೆ ವಿವಿಧ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕವೂ ಸೇವೆಯ ಮೊತ್ತವನ್ನು ಪಾವತಿಸಬಹುದಾಗಿದೆ.

ದೇವಸ್ಥಾನದ ಆಡಳಿತ ಮಂಡಳಿ ಭಕ್ತರು ತಮ್ಮ ಕುಟುಂಬದ ಸುಖ-ಶಾಂತಿ, ಆರೋಗ್ಯ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಈ ವಿಶೇಷ ಸೇವೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94958 59552

About The Author

Leave a Reply