

ಮಂಗಳೂರು: ಅತ್ತಾವರ ಚಕ್ರಪಾಣಿ ಸೇವಾ ಸಮಿತಿಯ ಆಶ್ರಯದಲ್ಲಿ ಜರಗುವ ಸಾರ್ವಜನಿಕ 36ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಗಣೇಶ ದೇವರ ವಿಗ್ರಹದ ಮುಹೂರ್ತ ಕಾರ್ಯಕ್ರಮ ವೈದಿಕ ವಿಧಿ ವಿಧಾನದೊಂದಿಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ವೇಳೆ ಚಕ್ರಪಾಣಿ ಸೇವಾ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಕ್ಷೇತ್ರದ ಆಡಳಿತ ಮಂಡಳಿ ಯ ಅಧ್ಯಕ್ಷರು ವ್ಯವಸ್ಥಾಪನೆ ಸಮಿತಿಯ ಸದಸ್ಯರುಗಳು ಹಾಗೂ ಊರಿನ ಭಗವದ್ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು






