July 13, 2026
WhatsApp Image 2026-07-13 at 9.42.21 AM

​ಕತಾರ್ ದೇಶದ ಮಾಜಿ ಅಮೀರ್ ಹಾಗೂ ಹಾಲಿ ಅಮೀರ್ ಅವರ ತಂದೆಯಾದ ಹಿಸ್ ಹೈನೆಸ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಜುಲೈ 13 ರಂದು ದೇಶಾದ್ಯಂತ ಒಂದು ದಿನದ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಈ ಕುರಿತು ಕೇಂದ್ರ ಸರ್ಕಾರವು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಶೋಕಾಚರಣೆಯ ದಿನದಂದು ಇಡೀ ದೇಶಾದ್ಯಂತ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲಿರುವ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ (Half-Mast) ಹಾರಿಸಲಾಗುವುದು ಮತ್ತು ಯಾವುದೇ ರೀತಿಯ ಅಧಿಕೃತ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.


​ಕತಾರ್‌ನ ಮಾಜಿ ಅಮೀರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕರಾವಳ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ. ಶೇಖ್ ಹಮದ್ ಅವರು ಕತಾರ್ ದೇಶವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಉನ್ನತ ಶಿಖರಕ್ಕೆ ಮುನ್ನಡೆಸಿದ ಒಬ್ಬ ಅಪ್ರತಿಮ ದೂರದರ್ಶಿ ನಾಯಕರಾಗಿದ್ದರು ಹಾಗೂ ಭಾರತದ ನಿಜವಾದ ಆಪ್ತ ಸ್ನೇಹಿತರಾಗಿದ್ದರು ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಈ ಕುರಿತು ಟ್ವಿಟರ್ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಕತಾರ್‌ನ ಮಾಜಿ ಅಮೀರ್ ಹಿಸ್ ಹೈನೆಸ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನದ ಸುದ್ದಿ ನಮಗೆ ತೀವ್ರ ದುಃಖವನ್ನುಂಟು ಮಾಡಿದೆ. ಕತಾರ್‌ನ ಅದ್ಭುತ ಪ್ರಗತಿಗೆ ಕಾರಣರಾದ ಅವರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಕಳೆದ 2024 ರ ಫೆಬ್ರವರಿಯಲ್ಲಿ ನಾನು ಕತಾರ್‌ಗೆ ಭೇಟಿ ನೀಡಿದ್ದಾಗ ಅವರನ್ನು ಭೇಟಿಯಾಗುವ ಗೌರವ ನನಗ ಸಿಕ್ಕಿತ್ತು. ಭಾರತದ ಹಿತೈಷಿಯಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ಪ್ರಾರ್ಥಿಸಿದ್ದಾರೆ. ಇದರ ಬೆನ್ನಲ್ಲೇ, ಭಾರತ ಸರ್ಕಾರದ ಪರವಾಗಿ ಕತಾರ್ ರಾಜಮನೆತನಕ್ಕೆ ಅಧಿಕೃತವಾಗಿ ಸಾಂತ್ವನ ಮತ್ತು ಸಂತಾಪವನ್ನು ತಿಳಿಸಲು ಭಾರತದ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶೀಘ್ರದಲ್ಲೇ ಕತಾರ್‌ಗೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Leave a Reply