July 14, 2026
WhatsApp Image 2026-07-14 at 7.31.13 AM

ತಾರೀಕು 12/7/2026 ಬಂಟ್ವಾಳ ಸಾಲೆತ್ತೂರು ಬೊಲ್ಪಾದೆ ಕನ್ಯಾನದಲ್ಲಿ ಬಾಡಿಗೆ ಮನೆ ಆಕಸ್ಮಿಕವಾಗಿ ಬೆಂಕಿ ಗಾಹುತಿಯಾಗಿ ನಿರ್ಗತಿಕರಾಗಿ ಸಂತ್ರಸ್ತ ಕುಲಾಲ ಕುಂಬಾರ ಕುಟುಂಬಕ್ಕೆ ನಿವೇಶನ ಸಹಿತ ಮನೆ ನಿರ್ಮಿಸಿ ಕರ್ನಾಟಕ ರಾಜ್ಯ ಕುಂಬಾರ ಕುಲಾಲ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಜಿಲ್ಲಾ ಸಮಿತಿ ವತಿಯಿಂದ ಕುಟುಂಬಕ್ಕೆ ಹಸ್ತಾಂತರ ಗೊಳಿಸಲಾಯಿತು.


2025ರ ಇಸವಿ ಡಿಸೆಂಬರ್ ತಿಂಗಳ 19ನೇ ತಾರೀಕಿಗೆ ಈ ಬಡ ಕುಟುಂಬ ವಾಸವಾಗಿದ್ದ ಕನ್ಯಾನದಲ್ಲಿ ಬಾಡಿಗೆ ಮನೆ ಹಗಲಲ್ಲಿ ಬೆಂಕಿಗಾಹುತಿಯಾಗಿತ್ತು ಆದಷ್ಟವಶಾತ್ ಮನೆಯಲ್ಲಿ ಈ ಕುಟುಂಬ ಸದಸ್ಯರು ಯಾರು ಇರಲಿಲ್ಲ .ಆದರೆ ಕೂಡಿಟ್ಟ ಅಲ್ಪಸ್ವಲ್ಪ ಹಣ ಚಿನ್ನ ಬಟ್ಟೆ ಬರೆ ಇತರ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿತ್ತು .ವಿದ್ಯುತ್ ಇಲಾಖೆ ಸೇರಿ ಪೋಲಿಸ್ ತನಿಖೆಯಲ್ಲಿ ಇದು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಗಡ ಸಂಭವಿಸಿದೆ. ಎಂದು ಸಂಶಯ ವ್ಯಕ್ತಪಡಿಸಿ ವರದಿ ನೀಡಿದ್ದಾರೆ .


ಇದಕ್ಕೆ ಈ ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕ ನೆಲೆಯಾಗಿ ಕನ್ಯಾನ ಗ್ರಾಮ ಪಂಚಾಯತ್ ಕೊಠಡಿಯನ್ನು ಕೊಟ್ಟಿತು .ಇದಕ್ಕೆ ಅಂದಿನ ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ರೇಖಾ ರಮೇಶ್ ರವರು ಸಹಕರಿಸಿದರು .
…ಈ ಪ್ರಕರಣ ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆ ಯ ಗಮನಕ್ಕೆ ಬಂದ ಕಾರಣ ಪರಿಸ್ಥಿತಿಯನ್ನು ಅವಲೋಕಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅನಿಲ್ದಾಸರವರು ನಿವೇಶನ ಖರೀದಿಸಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದರು..
ಇದಕ್ಕೆ ಶ್ರಮದಾನ ದೇಣಿಗೆ ಸಂಗ್ರಹ ಕಾರ್ಯಕ್ರಮಗಳ ಯೋಜನೆ ಇತ್ಯಾದಿಗಳನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ವೇದಿಕೆ ಹಮ್ಮಿಕೊಂಡಿತು. ಇದಕ್ಕೆ ಸಹಕಾರವಾಗಿ ಬೆಳ್ತಂಗಡಿಯ ಗುಂಡೂರಿ ಗ್ರಾಮದ ಗುರು ಚೈತನ್ಯ ಸೇವಾಶ್ರಮ ದ ಹೊನ್ನಯ್ಯ ಕಾಟಿಪಳ್ಳ ರವರು ಸಹಕರಿಸಿದರು.


ಅಂತೂ 12.07.2026 ರಂದು ಭಾನುವಾರ ಸಾಯಂಕಾಲ ಸಾಲೆತ್ತೂರಿನ ಬೊಳ್ಪಾದೆ ಎಂಬಲ್ಲಿ “”ಕುಂಭ ಕುಟೀರ “ಎಂಬ ಹೆಸರಿನ ನಿವೇಶನ ಸಹಿತ ಮನೆಯನ್ನು ಜಿಲ್ಲಾ ಸಮಿತಿಯ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರವಾಯಿತು.
ಕುಂಭ ಕುಟೀರ ನಿವೇಶನ ಸಹಿತ ಮನೆ ಹಸ್ತಾಂತರ ಕಾರ್ಯಕ್ರಮ ರಾಜ್ಯ ಅಧ್ಯಕ್ಷರಾದ ಸುಧಾಕರ್ ಸಾಲ್ಯಾನ್, ವಿಭಾಗೀಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಜಿಲ್ಲಾ ಅಧ್ಯಕ್ಷರಾದ ಅನಿಲ್ ದಾಸ್, ಹಿರಿಯರಾದ ಚಂದಪ್ಪ ಮೂಲ್ಯ ಬಂಟ್ವಾಳ ಸುರತ್ಕಲ್ ಕುಳಾಯಿ ಮಂಗಳೂರು ನೀರುಮಾರ್ಗ ವಿಟ್ಲ ಉಳ್ಳಾಲ ವಿಭಾಗದ ಕುಲಾಲ ನಾಯಕರುಗಳ ಉಪಸ್ಥಿತಿ ಯಲ್ಲಿ ಕುಲಾಲ ಯುವ ವೇದಿಕೆಯ ಸಂಸ್ಥಾಪಕರಾದ ಡಾಕ್ಟರ್ ಅಣ್ಣಯ್ಯ ಕುಲಾಲ್ ರವರು ದೀಪಬೆಳಗಿಸಿ ಭಜನೆಗೆ ಚಾಲನೆ ನೀಡಿ “ಮನೆ ಎಂದರೆ ಕೇವಲ ಕಲ್ಲು ಇಟ್ಟಿಗೆಯ ಗೂಡಲ್ಲ.. ಏಳುಬೀಳುಗಳ ಉಗ್ರಾಣವಿದು. ಮನೆ ಸದಸ್ಯರು ಮನೆಯಲ್ಲಿ ಕೂಡಿ ಬಾಳಿ ಒಬ್ಬರೊಬ್ಬರ ಮನಸ್ಸನ್ನು ಅರ್ಥಮಾಡಿ ಅರಿತು ಬಾಳಿದರೆ ಬದುಕು ಬಂಗಾರವಾಗುತ್ತದೆ .ಹಾಗೆ ಹಾಲು ಜೇನಿನಂತೆ ಬೆರೆತಂತೆ ರುಚಿ ಶುಚಿ ಯಾಗಿ ಹೃದಯ ಮನಸ್ಸು ಬೆರೆತಿರಬೇಕು. ಎಂದು ಹಿತನುಡಿಯಾಗಿ ಮಾತನಾಡಿ ಶುಭ ಹಾರೈಸಿದರು.


ತುಳುನಾಡ ಸಭಾ ಕೇಂದ್ರ ಸಮಿತಿ(ರಿ) ಇದರ ಅಧ್ಯಕ್ಷರಾದ ನಿಟ್ಟೆ ಕೆಎಸ್ ಹೆಗಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾಕ್ಟರ್ ಅವಿನ್ ಆಳ್ವರವರು ಈ ಕುಲಾಲ ಸಮಾಜವು ಇತರ ಸಮುದಾಯವನ್ನು ಒಟ್ಟು ಸೇರಿಸಿ ಸೌಹಾರ್ದದಿಂದ ಸಮಾಜ ಸೇವೆ ಮಾಡುವುದು ಈ ಸಮಾಜಕ್ಕೆ ವಿಶೇಷ ಮಾದರಿ ಎಂದು ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು .
ದ ಕ ಜಿಲ್ಲಾ ಅಧ್ಯಕ್ಷರಾದ ಶ್ರೀ ಅನಿಲ್ ದಾಸ್ ಕುಂಭ ಕುಟೀರ ಅನಾವರಣ ಮಾಡಿದರು. ಚಂದಪ್ಪ ಮೂಲ್ಯ ಭಗವದ್ ಗೀತೆ ಪುಸ್ತಕ ನೀಡಿ ಶುಭ ಹಾರೈಸಿದರು.


ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲಿಯಾನ್ ಸುರತ್ಕಲ್ .’ ಜಿಲ್ಲಾಧ್ಯಕ್ಷರಾದ ಅನಿಲ್ದಾಸರವರು ‘ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸುಮಿತ್ ಸಾಲಿಯಾನ್ , ವಿಭಾಗೀಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ್,ಮಾಜಿ ಆಯುಕ್ತರು ರಾಜ್ಯ ಮಾಹಿತಿ ಹಕ್ಕು ಆಯೋಗದ ಡಾ. ಲಿಂಗರಾಜು ಕೆ ಬೆಂಗಳೂರು, ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ,ವಿಟ್ಲಕುಲಾಲ ಸಂಘದ ಅಧ್ಯಕ್ಷ ಬಾಬು ಕುಲಾಲ್ ವಜ್ರಮಾತ, ಸಮಾಜಸೇವಕ ಅಚ್ಚುತ ಕುಲಾಲ್ ವಿಟ್ಲ, ಹಿರಿಯರಾದ ಮಹಾಬಲ ಕುಲಾಲ್, ಅಶೋಕ್ ಕುಲಾಲ್, ಸುರತ್ಕಲ್ ನ ಮಾಜಿ ಅಧ್ಯಕ್ಷ ದಿನಕರ್ ಕುಲಾಲ್, ಯುವ ವೇದಿಕೆ ಯ ಮಾಜಿ ರಾಜ್ಯಾಧ್ಯಕ್ಷ ಗಂಗಾದರ ಬಂಜನ್ ಮತ್ತು ವಿಟ್ಲ ಹಿಂದೂ ಮಹಾ ಸಂಗಮದ ಸದಸ್ಯರು ಮತ್ತಿತ್ತರು ಉಪಸಿತರಿದ್ದರು .


ಈ ಕುಂಭ ಕುಟೀರ ಮನೆ ನಿರ್ಮಾಣಕ್ಕೆ ಹತ್ತು ಹಲವು ಮಂದಿಗಳು ಶ್ರಮದಾನ ಕೊಡುಗೆ ಸಹಕಾರ ಮಾಡಿದವರಲ್ಲಿ ವಿಶೇಷವಾಗಿ ಪಕ್ಷಿಕೆರೆಯ ಟೈಲ್ಸ್ ಅಳವಡಿಕೆಯ ಶಿವಪ್ರಸಾದ್ ಕುಲಾಲ್ ,ಸಾಲೆತ್ತೂರಿನ ಮನೆ ಮಾಲೀಕರಾದ ಅಬ್ದುಲ್ ರೆಹಮಾನ್, ಕನ್ಯಾನದ ಮಾಜಿ ಅಧ್ಯಕ್ಷ ರೇಖಾ ರಮೇಶ್, ಸಾಲೆತ್ತೂರು ಕುಳಾಲ್ ನ ಎಲೆಕ್ಟ್ರಿಷಿಯನ್ ರವೀಂದ್ರ ಕುಲಾಲ್ ಹಾಗೂ ಸಹ ಉದ್ಯೋಗಿಗಳು, ಮುಡಿಪು ಕುಲಾಲ ವೇದಿಕೆಯ ನವೀನ್ ಕುಲಾಲ್ ಪೆದಮಲೆ, ಕನ್ಯಾನದ ಬಡಗಿ ಕೆಲಸ ಮಾಡುವ ಜಯರಾಮ ಗೌಡ ಇವರುಗಳ ವಿಶೇಷ ಕಾಳಜಿಯ ಸೇವೆಯನ್ನು ಗುರುತಿಸಿ ಸಮಾಜಕ್ಕೆ ಮಾದರಿ ಎಂದು ತಿಳಿಸಲು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು .
ಕಾರ್ಯಕ್ರಮವನ್ನು ಸುಕುಮಾರ್ ಬಂಟ್ವಾಳ್ ರವರು ಸ್ವಾಗತಿಸಿ ,ಎಚ್ ಕೆ ನೈನಾಡ್ ರವರು ನಿರೂಪಿಸಿ, ಫಲಾನುಭವಿ ಮನೆ ಸದಸ್ಯ ಕುಮಾರಿ ಗುಣವತಿ ಕುಲಾಲ್ ರವರು ಧನ್ಯವಾದ ಅರ್ಪಿಸಿದರು..

About The Author

Leave a Reply