July 24, 2026
w-412,h-232,croprect-0x0x1366x767,imgid-01ky9setcc6d9djynts3w5hht1,imgname-prince-abdullah-bin-fahad-bin-abdullah-death-1784887601548

ಪಾರ್ಟಿ ಡ್ರಗ್ಸ್, ಮದ್ಯ ಸೇವಿಸಿ ಸೌದಿ ರಾಜಕುಮಾರ ಸಾವು

ಲಂಡನ್: ಲಂಡನ್‌ನ ಕನ್ಸಿಂಗ್‌ಟನ್‌ನಲ್ಲಿರುವ ಐಷಾರಾಮಿ ಮ್ಯಾರಿಯಟ್ ಹೋಟೆಲ್ ಕೊಠಡಿಯಲ್ಲಿ ಸೌದಿ ಅರೇಬಿಯಾ ರಾಜಮನೆತನದ ರಾಜಕುಮಾರ ಪ್ರಿನ್ಸ್ ಅಬ್ದುಲ್ಲಾ ಬಿನ್ ಫಹಾದ್ (29) ಅವರ ಸಾವಿಗೆ
ಅತಿಯಾದ ಮದ್ಯಪಾನ ಹಾಗೂ ಅಪಾಯಕಾರಿ ‘ಪಾರ್ಟಿ ಡ್ರಗ್ಸ್’ ಸೇವನೆಯಿಂದ ಆದ ಹೃದಯಾಘಾತ ಎಂದು ಗೊತ್ತಾಗಿದೆ.
ಬ್ರಿಟನ್‌ ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ.
ಏನಿದು ಘಟನೆ?
2025 ನವೆಂಬರ್ 19 ರಂದು ಒಂದು ವಾರದ ತಂಗುವಿಕೆಗಾಗಿ ಹೋಟೆಲ್‌ಗೆ ಆಗಮಿಸಿದ್ದ ರಾಜಕುಮಾರನನ್ನು ಕೊನೆಯ ಬಾರಿಗೆ ಸಿವಿಟಿವಿಯಲ್ಲಿ ಕಾಣಿಸಿಕೊಂಡಿದ್ದರು..
ಹೋಟೆಲ್ ಕೊಠಡಿಯಲ್ಲಿದ್ದ ರಾಜಕುಮಾರ ಉಸಿರಾಡದೆ ಬಿದ್ದಿರುವುದನ್ನು ಗಮನಿಸಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಲಂಡನ್‌ ಮೆಟ್ರೋಪಾಲಿಟನ್ ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದರು. ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಹಾಗೂ ಖಿನ್ನತೆ ವಿರೋಧಿ ಮಾತ್ರೆಗಳು ಪತ್ತೆಯಾಗಿದ್ದವು.
ವರದಿಯಲ್ಲೇನಿದೆ?
ಬ್ರಿಟನ್‌ ಕೊರೊನರ್ (ತನಿಖಾಧಿಕಾರಿ) ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ರಾಜಕುಮಾರನ ರಕ್ತದಲ್ಲಿ ಮದ್ಯದ ಪ್ರಮಾಣವು ನಿಗದಿತ ಮಿತಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಇದರ ಜೊತೆಗೆ ‘ಜಿಎಚ್‌ಬಿ’ (GHB) ಎಂಬ ಪ್ರಬಲ ಪಾರ್ಟಿ ಡ್ರಗ್ಸ್‌ ಹಾಗೂ ‘ಕ್ಸಾನಾಕ್ಸ್’ ಮಾತ್ರೆಗಳನ್ನು ಒಟ್ಟಿಗೆ ಸೇವಿಸಲಾಗಿತ್ತು. ಈ ಮಾರಕ ಮಿಶ್ರಣದಿಂದಾಗಿ ನರಮಂಡಲದ ಮೇಲೆ ತೀವ್ರ ಒತ್ತಡ ಬಿದ್ದು, ಶ್ವಾಸಕೋಶ ಮತ್ತು ಹೃದಯದ ಕಾರ್ಯಾಚರಣೆ ಸ್ತಬ್ಧಗೊಂಡು ಮೃತಪಟ್ಟಿದ್ದಾರೆ.
ಇದು ಕೊಲೆ ಅಥವಾ ಆತ್ಮಹತ್ಯೆಯಲ್ಲ; ಬದಲಿಗೆ ಅತಿಯಾದ ಮಾದಕ ದ್ರವ್ಯ ಸೇವನೆಯಿಂದ ಸಂಭವಿಸಿದ ಆಕಸ್ಮಿಕ ಸಾವು (Death by Misadventure) ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


ಪುನರ್ವಸತಿ ಕೇಂದ್ರದಲ್ಲಿದ್ದರು:
ಮೃತ ರಾಜಕುಮಾರ ಅಬ್ದುಲ್ಲಾ ಅವರು ಕಳೆದ ಕೆಲವು ಸಮಯದಿಂದ ಮಾದಕ ವ್ಯಸನದಿಂದ ಬಳಲುತ್ತಿದ್ದರು. ಈ ಚಟದಿಂದ ಹೊರಬರಲು ಲಂಡನ್‌ನ ಪುನರ್ವಸತಿ ಕೇಂದ್ರವೊಂದರಲ್ಲಿ (Rehab) ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಚಿಕಿತ್ಸೆಯ ನಡುವೆಯೇ ಮತ್ತೆ ಮದ್ಯ ಮತ್ತು ಡ್ರಗ್ಸ್ ಅತಿಯಾಗಿ ಸೇವಿಸಿದ್ದು ಈ ದುರಂತಕ್ಕೆ ಕಾರಣವಾಗಿದೆ.

About The Author

Leave a Reply