August 3, 2026
WhatsApp Image 2026-08-03 at 5.11.40 PM

ಉಳ್ಳಾಲ: ಜಿಒಎಸ್ ಆಫ್ ( ಗ್ರೂಪ್ ಆಪರೇಟೆಡ್ ಸ್ವಿಚ್‌) ಮಾಡದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಏರಿದ ಮೆಸ್ಕಾಂ ಲೈನ್ ಮೆನ್ ಓರ್ವ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಟಣ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಂಬಿಕಾರೋಡ್ ಪಿಲಾರು ನಿವಾಸಿ ಶೇಖ್ ಝಮೀರ್(49) ಮೃತಪಟ್ಟ ವ್ಯಕ್ತಿ. ಉಚ್ಚಿಲ ನಯಾಪಟ್ಟದ ಟ್ರಾನ್ಸ್‌ ಫಾರ್ಮರ್ ನಲ್ಲಿ ದೋಷದ ಬಗ್ಗೆ ಮೆಸ್ಕಾಂಗೆ ದೂರು ಬಂದ ಹಿನ್ನೆಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬವರು ಇಂದು ಬೆಳಗ್ಗೆ ಸ್ಥಳಕ್ಕೆ ದುರಸ್ತಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮ‌ರ್ ಏರಿದ ಝಮೀರ್ ವಿದ್ಯುತ್‌ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಝಮೀರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾರಿ ಮಧ್ಯದಲ್ಲೇ ಅವರು ಸಾಗಿಸುವ ಕೊನೆಯುಸಿರೆಳೆದಿದ್ದಾರೆ.

ಮೃತ ಝಮೀರ್ ಪತ್ನಿ ಮತ್ತು ಓರ್ವ ಹೆಣ್ಣು ಮಗಳನ್ನ ಅಗಲಿದ್ದಾರೆ.

About The Author

Leave a Reply